Monday, May 6, 2024
Homeಕ್ರೀಡೆಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ; ಶೂಟಿಂಗ್ ನಲ್ಲಿ ದಾಖಲೆ ಬರೆದ ಅವನಿ...

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ; ಶೂಟಿಂಗ್ ನಲ್ಲಿ ದಾಖಲೆ ಬರೆದ ಅವನಿ ಲೆಕೇರಾ!

spot_img
- Advertisement -
- Advertisement -

ಟೋಕಿಯೊ: ಪ್ಯಾರಾಲಿಂಪಿಕ್​ನಲ್ಲಿ ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಲೆಕೇರಾ ಅವರು ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಈ ಮೂಲಕ ಭಾರತದ ಪದಕಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅವನಿ ಶೂಟಿಂಗ್​ ಫೈನಲ್​ ಪಂದ್ಯದಲ್ಲಿ 249.6 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. 10 ಮೀಟರ್​ನ ಏರ್​ ರೈಫಲ್ ಶೂಟಿಂಗ್​ನಲ್ಲಿ ಚಿನ್ನ ಗೆದ್ದಿರುವ ಅವನಿ ಇಂದು ಬೆಳಗ್ಗೆ ರೌಂಡ್ 2 ನಲ್ಲಿ ಫೈನಲ್​ಗೆ ಆಯ್ಕೆಯಾಗಿದ್ದರು. ಪ್ಯಾರಾಲಿಂಪಿಕ್​ನ ಶೂಟಿಂಗ್​ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪ್ಯಾರಾಥ್ಲೆಟಿಕ್ ಎಂಬ ಸಾಧನೆಯನ್ನು ಇವರು ಮಾಡಿದ್ದಾರೆ.

ಭಾವಿನಾಬೆನ್ ಪಟೇಲ್‌ ಮತ್ತು ನಿಶಾದ್ ಕುಮಾರ್ ಭಾನುವಾರ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕಗಳನ್ನು ಗೆದ್ದುಕೊಟ್ಟಿದ್ದರು.

- Advertisement -
spot_img

Latest News

error: Content is protected !!