Monday, May 13, 2024
Homeತಾಜಾ ಸುದ್ದಿಅಬ್ಬಬ್ಬಾ!  ಇದೆಂತಹ ಪ್ರೀತಿ; ಪತ್ನಿಗಾಗಿ ಮೊಪೆಡ್ ಬೈಕ್ ಖರೀದಿಸಿ ಗಿಫ್ಟ್ ನೀಡಿದ ಭಿಕ್ಷುಕ

ಅಬ್ಬಬ್ಬಾ!  ಇದೆಂತಹ ಪ್ರೀತಿ; ಪತ್ನಿಗಾಗಿ ಮೊಪೆಡ್ ಬೈಕ್ ಖರೀದಿಸಿ ಗಿಫ್ಟ್ ನೀಡಿದ ಭಿಕ್ಷುಕ

spot_img
- Advertisement -
- Advertisement -

ಮಧ್ಯಪ್ರದೇಶ : ಇಲ್ಲಿನ ಭಿಕ್ಷುಕನೊಬ್ಬ ಇದೀಗ ಭಾರೀ ಸುದ್ದಿಯಲ್ಲಿದ್ದಾನೆ.‌  ಮಧ್ಯಪ್ರದೇಶದ ಛಿಂಡ್ವಾರ ಜಿಲ್ಲೆಯ ಭಿಕ್ಷುಕ ಆತತ  ಪತ್ನಿಗೆ ಉಡುಗೊರೆ ನೀಡಲು ಮೊಪೆಡ್‌ನ್ನು 90 ಸಾವಿರ ನೀಡಿ ಖರೀದಿಸಿದ್ದಾನೆ.

ಸಂತೋಷ್ ಸಾಹು ಎಂಬ ಭಿಕ್ಷುಕ ಹುಟ್ಟು ದಿವ್ಯಾಂಗ. ಜೀವನ ನಡೆಸಲು ಭಿಕ್ಷಾಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಈತನ ಕಾಲುಗಳೆರಡು ಶಕ್ತಿ ಗುಂದಿರುವುದರಿಂದ ಭಿಕ್ಷಾಟನೆ ಅನಿವಾರ್ಯವಾಗಿ ಈತನ ವೃತ್ತಿಯಾಗಿದೆ. ಸಂತೋಷ್ ಸಾಹು ಇದುವರೆಗೆ ತನ್ನ ಗಾಲಿ ಕುರ್ಚಿಯಲ್ಲಿ ಕುಳಿತರೆ ಪತ್ನಿ ಮುನ್ನಿ ಆತನನ್ನು ಹಿಂದಿನಿಂದ ತಳ್ಳಿಕೊಂಡು ಹೋಗುತ್ತಿದ್ದಳು.

ಅವರಿಬ್ಬರು ಸಾಗುವ ರಸ್ತೆಯೂ ಸರಿ ಇಲ್ಲದ ಪರಿಣಾಮ ಇವರಿಗೆ ಭಿಕ್ಷಾಟನೆಗೆ ಸಾಗುವುದೇ ಕಷ್ಟವಾಗುತ್ತಿತ್ತು. ಇದರಿಂದ ಹೆಂಡತಿ ಅಸ್ವಸ್ಥಳಾಗುವುದು ಹಾಗೂ ಕಷ್ಟಪಡುವುದನ್ನು ನೋಡಿದ ಸಂತೋಷ್‌ ಸಾಹು ಆಕೆಗಾಗಿ ಒಂದು ಮೊಪೆಡ್ ಗಿಫ್ಟ್ ನೀಡಲು ನಿರ್ಧರಿಸಿದ್ದಾನೆ.

ತಾವು ಗಳಿಸಿದ್ದ ಹಣವನ್ನು ಉಳಿತಾಯ ಮಾಡಿ ನಾಲ್ಕು ವರ್ಷದ ಬಳಿಕ, 90 ಸಾವಿರ ಹಣ ನೀಡಿ ಮೊಪೆಡ್‌ ಖರೀದಿಸಿದ್ದಾರೆ. ಈಗ ದಿನವೂ ದಂಪತಿ ಈ ಮೊಪೆಡ್ ಮೂಲಕ ಒಟ್ಟಿಗೆ ತೆರಳಿ ಭಿಕ್ಷಾಟನೆ ಮಾಡುತ್ತಾರೆ. ಭಿಕ್ಷುಕನಾದರೂ ಪತ್ನಿ ಮೇಲಿನ ಈತನ ಅಪರಿಮಿತ ಪ್ರೀತಿಗೆ ಜನ ಬೆರಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!