Thursday, June 4, 2026
Homeತಾಜಾ ಸುದ್ದಿಮದುವೆ ವೇಳೆ ಉದುರಿ ಬಿದ್ದ ವರನ ವಿಗ್; ನಿಜ ರೂಪ ನೋಡಿ ಮದುವೆ ನಿರಾಕರಿಸಿದ ವಧು

ಮದುವೆ ವೇಳೆ ಉದುರಿ ಬಿದ್ದ ವರನ ವಿಗ್; ನಿಜ ರೂಪ ನೋಡಿ ಮದುವೆ ನಿರಾಕರಿಸಿದ ವಧು

- Advertisement -
- Advertisement -

ಉತ್ತರಪ್ರದೇಶ: ಮದುವೆ ಮಂಟಪದಲ್ಲಿ  ವೇಳೆ ವರನ ತಲೆಯಿಂದ ವಿಗ್‌ ಕೆಳಗೆ ಬಿದ್ದಿದ್ದನ್ನು ಕಂಡು ವಧು ಮದುವೆಯನ್ನು ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ಗಂಡು ತನ್ನದು ಬೋಳು ತಲೆ ಎಂಬ ವಿಷಯವನ್ನು ವಧುವಿನ ಕುಟುಂಬಸ್ಥರೊಂದಿಗೆ ಮುಚ್ಚಿಟ್ಟಿದ್ದಾನೆ. ಮದುವೆ ಆಗುವವರೆಗೆ ಈ ವಿಷಯ ಅವರಿಗೆ ತಿಳಿಯಬಾರದೆಂದು ಬಹಳ ಜಾಗರೂಕತೆಯಿಂದ ನಡೆದುಕೊಂಡಿದ್ದಾನೆ. ಆದರೆ ಮದುವೆ ದಿನವೇ ಆತನ ನಿಜ ರೂಪ ಬಯಲಾಗಿದೆ.

ಮದುವೆ ದಿನ ಮಂಟಪಕ್ಕೆ ಬರುತ್ತಿದ್ದ ವೇಳೆ ವರ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಆತನ ತಲೆಯಲ್ಲಿದ್ದ ವಿಗ್‌ ಕಳಚಿ ಬಿದ್ದು, ಬೋಳು ತಲೆ ಕಾಣಿಸಿದೆ. ಇದರಿಂದ ವಧು ಹಾಗೂ ಆಕೆಯ ಕಡೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೋಳುತಲೆಯ ವರನನ್ನು ತಾನು ಮದುವೆಯಾಗುವುದಿಲ್ಲ ಎಂದು ವಧು ನಿರಾಕರಿಸಿದ್ದಾಳೆ. ಕೊನೆಗೆ ಮದುವೆ ನಿಂತು ಹೋಗಿದೆ.

ಮದುವೆಗಾಗಿ ವಧುವಿನ ಕಡೆಯವರು 5.66 ಲಕ್ಷ ಖರ್ಚು ಮಾಡಿದ್ದರು. ನಷ್ಟದ ಮೊತ್ತವನ್ನು ವರನ ಕುಟುಂಬದವರು ನೀಡಿದ್ದಾರೆ.

- Advertisement -

Latest News

error: Content is protected !!