Saturday, October 17, 2026
Homeಕರಾವಳಿಕಲ್ಲುಗಂಡಿ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

ಕಲ್ಲುಗಂಡಿ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿ

- Advertisement -
- Advertisement -

ಸುಳ್ಯ: ಬಿಯರ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಲ್ಲುಗುಂಡಿ ಸಮೀಪದ ಜೋಡುಪಾಲದಲ್ಲಿ ನಡೆದಿದೆ.


ಮಡಿಕೇರಿಯಿಂದ ಮಂಗಳೂರು ಕಡೆಗೆ ಬಿಯರ್ ಬಾಕ್ಸ್ ಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿಯು ಜೋಡುಪಾಲ ಎಂಬಲ್ಲಿ ಪಲ್ಟಿಯಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಇನ್ನು ಕಳೆದ ಕೆಲವು ದಿನಗಳ ಹಿಂದೆ ಸುಳ್ಯದ ಅರಂತೋಡಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಯರ್‌ ಲಾರಿಯೊಂದು ಇದೇ ರೀತಿ ಪಲ್ಟಿಯಾಗಿತ್ತು. ಬಿಯರ್‌ ಲಾರಿ ಮುಗುಚಿಬಿದ್ದ ಸುದ್ದಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅಳಿದುಳಿದ ಬಾಟಲ್‌ಗಳನ್ನು ತೆಗೆದುಕೊಂಡು ಹೋಗಿದ್ದರು.

- Advertisement -

Latest News

error: Content is protected !!