Thursday, June 4, 2026
Homeತಾಜಾ ಸುದ್ದಿತೆನೆ ಹೊತ್ತ ಮಹಿಳೆಗೆ ಟಾಟಾ ಹೇಳಿದ ಬಸವರಾಜ್ ಹೊರಟ್ಟಿ: ಕಮಲ ಹಿಡಿಯಲು ರೆಡಿಯಾದ ವಿಧಾನ...

ತೆನೆ ಹೊತ್ತ ಮಹಿಳೆಗೆ ಟಾಟಾ ಹೇಳಿದ ಬಸವರಾಜ್ ಹೊರಟ್ಟಿ: ಕಮಲ ಹಿಡಿಯಲು ರೆಡಿಯಾದ ವಿಧಾನ ಪರಿಷತ್ ಸಭಾಪತಿ

- Advertisement -
- Advertisement -

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಜೆಡಿಎಸ್ ಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಜೆಡಿಎಸ್ ತೊರೆದು, ಶೀಘ್ರವೇ ಬಿಜೆಪಿ ಸೇರ್ಪಡೆಯಾಗೋದಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಘೋಷಣೆ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರ್ಪಡೆಯಾಗೋದು ಖಚಿತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಎಲ್ಲರೂ ಬಿಜೆಪಿ ಸೇರ್ಪಡೆಗೆ ಸಹಮತ ವ್ಯಕ್ತ ಪಡಿಸಿದ್ದಾರೆ ಎಂದರು.

ಈಗಾಗಲೇ ಈ ವಿಷಯವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ಕುಮಾರಸ್ವಾಮಿಯವರಿಗೂ ತಿಳಿಸಿದ್ದಾನೆ. ಅವರು ಕೂಡ ಜೆಡಿಎಸ್ ಪಕ್ಷ ಬಿಡೋ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗೋದಾಗಿ ಹೇಳಿದ್ದಾರೆ.

- Advertisement -

Latest News

error: Content is protected !!