Thursday, June 4, 2026
Homeಕರಾವಳಿಉಡುಪಿಉಡುಪಿ: ಮನೆಯಲ್ಲಿ ಅಗ್ನಿ ಅವಘಡದಿಂದ ಬಾರ್ ಮಾಲೀಕ ಸಾವು; ಪತ್ನಿ ಗಂಭೀರ

ಉಡುಪಿ: ಮನೆಯಲ್ಲಿ ಅಗ್ನಿ ಅವಘಡದಿಂದ ಬಾರ್ ಮಾಲೀಕ ಸಾವು; ಪತ್ನಿ ಗಂಭೀರ

- Advertisement -
- Advertisement -

ಉಡುಪಿ: ಮನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ ಬಾರ್‌ ಮಾಲೀಕ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಅಂಬಲಪಾಡಿಯ ಗಾಂಧಿನಗರದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಂಬಲಪಾಡಿಯ ಶೆಟ್ಟಿ ಬಾರ್ ಮತ್ತು ರೆಸ್ಟೋರೆಂಟ್‌ ಮಾಲೀಕ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ನಡೆದಿದೆ.

ಅನಾಹುತದಲ್ಲಿ ರಮಾನಂದ ಶೆಟ್ಟಿ ಮತ್ತು ಪತ್ನಿ ಇಬ್ಬರೂ ಪ್ರಜ್ಞೆ ತಪ್ಪಿ ಬೆಂಕಿಯಲ್ಲಿ ಸಿಲುಕಿದ್ದು ನಂತರ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ತೀವ್ರ ಸುಟ್ಟ ಗಾಯಗಳಾಗಿದ್ದ ರಮಾನಂದ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪತ್ನಿ ಅಶ್ವಿನಿ ಶೆಟ್ಟಿ ಗಂಭೀರ ಸ್ಥಿತಿಯಲ್ಲಿದ್ದಾರೆ.ಘಟನೆಯಲ್ಲಿ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದು,ಬೆಂಕಿಯ ಜ್ವಾಲೆಗೆ ಮನೆ ಸಂಪೂರ್ಣ ಸುಟ್ಟು ಹೋಗಿದೆ.

- Advertisement -

Latest News

error: Content is protected !!