Friday, June 5, 2026
Homeಕರಾವಳಿಉಡುಪಿಉಡುಪಿ: ಪತ್ನಿ ಮಗಳ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿರುವ ಆಪತ್ಫಾಂಧವ ಆಸೀಫ್ ನ ಮತ್ತೊಂದು ಕುಕೃತ್ಯ ಬಯಲು

ಉಡುಪಿ: ಪತ್ನಿ ಮಗಳ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿರುವ ಆಪತ್ಫಾಂಧವ ಆಸೀಫ್ ನ ಮತ್ತೊಂದು ಕುಕೃತ್ಯ ಬಯಲು

- Advertisement -
- Advertisement -

ಉಡುಪಿ: ತನ್ನ ಪುತ್ರಿಯ ವೀಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಾಪತ್ತೆಯಾಗಿರುವ ಉಡುಪಿಯ ಸಮಾಜ ಸೇವಕ ಆಪತ್ಫಾಂಧವ ಆಸೀಫ್ ನ ಮತ್ತೊಂದು ಕೃತ್ಯ ಈಗ ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದೆ ಆಸೀಫ್ ಒಡೆತನದ ಆಂಬ್ಯುಲೆನ್ಸ್ ಡ್ರೈವರ್ ಆಗಿದ್ದ ಸಿರಾಜ್ ಮೇಲೆ ಮೇಲೆ ಬೆಲ್ಟ್ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದೆನ್ನಲಾದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಡು ತಿಂಗಳ ಬಾಕಿ ಸಂಬಳ ನೀಡುವಂತೆ ಸಿರಾಜ್ ಕೇಳಿದ್ದಕ್ಕೆ ಸಿರಾಜ್ ಜೊತೆ ತನ್ನ ಪತ್ನಿಯನ್ನು ಕೂರಿಸಿ ಅಕ್ರಮ ಸಂಬಂಧ ಕಲ್ಪಿಸಿ ಆಸೀಫ್ ಹಲ್ಲೆ ನಡೆಸಿದ್ದ ಎನ್ನಲಾಗಿದೆ.ಹಲ್ಲೆ ಬಳಿಕ ಸಿರಾಜ್ ಕೆಲಸ ತೊರೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ವೀಡಿಯೋ ಹರಿದಾಡುತ್ತಿದೆ.

ಸದ್ಯ ಪತ್ನಿ ಮತ್ತು ಮಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಆಸಿಫ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

- Advertisement -

Latest News

error: Content is protected !!