- Advertisement -
![]()
- Advertisement -
ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಬಾಲಿವುಡ್ ನಟಿ ಕತ್ರೀನಾ ಕೈಫ್ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ ನಟಿ ಕತ್ರೀನಾ ಕೈಫ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಲ್ಲದೇ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಪತ್ನಿ ಅತಿಯಾ ಶೆಟ್ಟಿ ಜೊತೆ ಭೇಟಿ ನೀಡಿದ್ದಾರೆ. ಈ ವೇಳೆ ಅತಿಯಾ ಸಹೋದರ ಅಹಾನ್ ಶೆಟ್ಟಿ ಕೂಡಾ ಜೊತೆಗಿದ್ದರು.
ಬಳಿಕ ಕ್ಷೇತ್ರದಲ್ಲಿ ನಡೆಯುವ ಕೋಲ ಸೇವೆಯಲ್ಲೂ ಕತ್ರೀನಾ ಕೈಫ್ ಮತ್ತು ಕೆ.ಎಲ್. ರಾಹುಲ್ ಭಾಗವಹಿಸಿದ್ದರು.
- Advertisement -


