Thursday, March 28, 2024
Homeಕರಾವಳಿಬಂಟ್ವಾಳ: ಬೆಳಿಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಗ್ರಾ.ಪಂ ಸದಸ್ಯೆ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ

ಬಂಟ್ವಾಳ: ಬೆಳಿಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಗ್ರಾ.ಪಂ ಸದಸ್ಯೆ ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ

spot_img
- Advertisement -
- Advertisement -

ವಿಟ್ಲ: ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಸಮಾನ ಪಡೆದಿದ್ದು, ಅಧಿಕಾರ ಪಡೆಯಲು ಎರಡು ಪಕ್ಷಗಳು ಒಂದಲ್ಲ ಒಂದು ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇಂದು ಬೆಳಿಗ್ಗೆ ವೀರಕಂಬ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯೆ ಲಲಿತಾ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಮೂಲಕ ವೀರಕಂಬ ಪಂಚಾಯತ್ ನ ಅಧಿಕಾರವೇರಲು ಸಜ್ಜಾಗಿದ್ದ ಬಿಜೆಪಿಗೆ ಸದಸ್ಯೆ ಲಲಿತಾ ಕೊನೆ ಕ್ಷಣದಲ್ಲಿ ಶಾಕ್ ನೀಡಿದ್ದಾರೆ.

ಸದಸ್ಯೆ ಲಲಿತಾ ಅವರು ಸಂಜೆ ವೇಳೆಗೆ ಮತ್ತೆ ಮಾತೃ ಪಕ್ಷ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಇದೀಗ ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಆಡಳಿತವಿತ್ತು. ಈ ಭಾರಿಯ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ 7-7 ಸ್ಥಾನ ಪಡೆದುಕೊಂಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಲಲಿತಾ ಅವರನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಬಿಜೆಪಿಗೆ ಸೇರ್ಪಡೆ ಗೊಳಿಸಲಾಗಿತ್ತು.

ಕಾಂಗ್ರೆಸ್ ಬಿಜೆಪಿ ಸಮಬಲದಲ್ಲಿದ್ದ ವೀರಕಂಬ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೇರಿತು ಎಂದು ಸಂತಸಪಟ್ಟಿತ್ತು. ಸಂಜೆ ವೇಳೆಗೆ ಲಲಿತಾ ಅವರು ಮಾಜಿ ಸಚಿವ ರಮಾನಾಥ ರೈ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಗೊಂಡಿದ್ದಾರೆ.

- Advertisement -
spot_img

Latest News

error: Content is protected !!