Thursday, June 4, 2026
Homeತಾಜಾ ಸುದ್ದಿತನ್ನ ಸೆಕ್ಸ್​ ವಿಡಿಯೋ​ ಮಾಡಿ ಪೋರ್ನ್​ ವೆಬ್​ಸೈಟ್​ನಲ್ಲಿ ಹರಿಬಿಟ್ಟ ನಟಿ, ನಿರೂಪಕಿಯ ಬಂಧನ

ತನ್ನ ಸೆಕ್ಸ್​ ವಿಡಿಯೋ​ ಮಾಡಿ ಪೋರ್ನ್​ ವೆಬ್​ಸೈಟ್​ನಲ್ಲಿ ಹರಿಬಿಟ್ಟ ನಟಿ, ನಿರೂಪಕಿಯ ಬಂಧನ

- Advertisement -
- Advertisement -

ಮುಂಬೈ: ಸೆಕ್ಸ್​ ವಿಡಿಯೋ ಶೂಟಿಂಗ್ ಮಾಡಿ ಅದನ್ನು ಪೋರ್ನ್​ ವೆಬ್​ಸೈಟ್​ ಒಂದಕ್ಕೆ ಅಪ್​ಲೋಡ್​ ಮಾಡಿರುವ ಆರೋಪದ ಮೇಲೆ ನಟಿ ಗೆಹಾನಾ ವಸಿಷ್ಠ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮಧ್ಯ ಪ್ರದೇಶ ಮೂಲದ ಗೆಹನಾ ಹಾಟೆಸ್ಟ್​ ತಾರೆ ಎಂದೇ ಗುರುತಿಸಿಕೊಂಡವರು. ಇದೀಗ ವೆಬ್‍ಸೈಟ್​ನಲ್ಲಿ ಸೆಕ್ಸ್​ ವಿಡಿಯೋ ಅಪ್​ಲೋಡ್​ ಮಾಡಿ ಮುಂಬೈ ಅಪರಾಧ ವಿಭಾಗದ ಪೊಲೀಸರ ಅತಿಥಿಯಾಗಿದ್ದಾರೆ. ಇವರ ವಿರುದ್ಧ ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್​ಲೋಡ್​ ಆರೋಪಕ್ಕೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲು ಮಾಡಲಾಗಿದೆ.

ಗೆಹನಾ ಅವರ ಮೂಲ ಹೆಸರು ವಂದನಾ. ಖಾಸಗಿ ವಾಹಿನಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದು ಬಳಿಕ ಮಾಡೆಲ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ನಂತರ ಗೆಹನಾ ಎಂದು ಹೆಸರು ಬದಲಾಯಿಸಿಕೊಂಡರು. ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಆಕೆ ಅನೇಕ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿಯೂ ಇವರದ್ದು ಹೆಚ್ಚು ಹಾಟ್​ ಎನ್ನುವ ಪಾತ್ರಗಳಲ್ಲಿಯೇ ಕಾಣಿಸಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಯುವಕರ ಎದೆ ಬಡಿತ ಹೆಚ್ಚಿಸುವ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾಳೆ.

- Advertisement -

Latest News

error: Content is protected !!