Saturday, June 6, 2026
Homeತಾಜಾ ಸುದ್ದಿಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ KSRTC ಬಸ್ ಗೆ ಡಿಕ್ಕಿ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ KSRTC ಬಸ್ ಗೆ ಡಿಕ್ಕಿ

- Advertisement -
- Advertisement -

ಬಂಟ್ವಾಳ: ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ KSRTC ಬಸ್ ಗೆ ಡಿಕ್ಕಿಯಾದ ಘಟನೆ ವಗ್ಗ ಸಮೀಪದ ಕಾಡುಬೆಟ್ಟು ಕ್ರಾಸ್ ಬಳಿ ನಡೆದಿದೆ.

 ಘಟನೆಯಲ್ಲಿ ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಬಿಸಿರೋಡು – ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಕಾರಿಂಜ ಕಾಡಬೆಟ್ಟು ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುವ ಬಸ್ ಗೆ ಡಿಕ್ಕಿಯಾಗಿದೆ. ಪರಿಣಾಮ ಬಸ್ ಚಾಲಕ , ಅದರಲ್ಲಿದ್ದ ಪ್ರಯಾಣಿಕರು ಹಾಗೂ ಲಾರಿ ಚಾಲಕನಿಗೆ ಗಾಯವಾಗಿದೆ.

ಲಾರಿ ಚಾಲಕ ಚಿತ್ರದುರ್ಗ ಸಮೀಪದ ಹಿರಿಯೂರಿ‌ನ ಮಹೇಶ್ ,ಬಸ್ ಚಾಲಕ ಉಮೇಶ್, ಪ್ರಯಾಣಿಕರಾದ ನಳಿನಿ ಬೆಳ್ತಂಗಡಿ, ವಿದ್ಯಾರ್ಥಿ‌ನಿ ಮಧುರಾ ಇರ್ವತ್ತೂರು,ರಕ್ಷಣ್ ವೇಣುಗೋಪಾಲ ಕಾವಳಪಡೂರು, ತಾರಾನಾಥ ಗರ್ಡಾಡಿರೋಹಿಣಿ ಮದ್ದಡ್ಕ ಗಾಯಗೊಂಡವರು. ಘಟನೆ ಬಗ್ಗೆ ಬಂಟ್ವಾಳ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!