Friday, October 11, 2024
Homeಕರಾವಳಿಭಾನುವಾರ ರಜಾ ದಿನವೂ ಕರ್ತವ್ಯ ಪ್ರಜ್ಞೆ ಮೆರೆದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್

ಭಾನುವಾರ ರಜಾ ದಿನವೂ ಕರ್ತವ್ಯ ಪ್ರಜ್ಞೆ ಮೆರೆದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್

spot_img
- Advertisement -
- Advertisement -

ಬಂಟ್ವಾಳ: ಕೇರಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಪಾಸಿಟಿವ್ ಪ್ರಕರಣದಿಂದಾಗಿ ದ.ಕ.ಜಿಲ್ಲೆಯ ಜನತೆಯಲ್ಲಿ ಒಂದು ರೀತಿಯಲ್ಲಿ ಭಯ ಉಂಟಾಗಿದೆ. ಯಾವಾಗ ಗಡಿ ರಸ್ತೆ ಓಪನ್ ಮಾಡುತ್ತಾರೆ ಎಂಬ ಭಯ ಜನರಲ್ಲಿದೆ. ಅಲ್ಲಿನ ಗಡಿ ರಸ್ತೆಗಳು ಸಂಪೂರ್ಣ ಬಂದ್ ಆದರೆ ಮಾತ್ರ ಜಿಲ್ಲೆ ಸೇಫ್ ಎಂದು ಹೇಳಲಾಗುತ್ತಿದ್ದು ಅದಕ್ಕಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಹಾಗೂ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.
ಗಡಿ ತೆರವು ಅಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ಅವರು ಹೇಳಿದ್ದಾರೆ. ಅದರೂ ಕೇರಳದಿಂದ ದ.ಕ.ಜಿಲ್ಲೆ ಗೆ ಬರಲು ಹತ್ತಾರು ಮಾರ್ಗಗಳಿರುವುದೇ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ವಿಟ್ಲ ಭಾಗದಲ್ಲಿ ಕೇರಳಕ್ಕೆ ಸಂಪರ್ಕ ರಸ್ತೆಗಳು ಹೆಚ್ಚಾಗಿರುವುದೇ ಜನರ ಆತಂಕಕ್ಕೆ ಕಾರವಾಗಿದೆ.

ತಾಲೂಕು ತಹಶೀಲ್ದಾರ್ ರಶ್ಮಿ. ಎಸ್. ಆರ್

ಕರೋಪಾಡಿ -ಕೇರಳ ಗಡಿ ರಸ್ತೆ ಬಂದ್ ವಿವಾದ ಬಗೆಹರಿಸಲು ಸ್ವತಃ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್. ಆರ್.ಅವರು ಇಂದು ಬೆಳಿಗ್ಗೆ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಅವರ ಜೊತೆ ಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಬಂಟ್ವಾಳ ತಾಲೂಕು ವ್ಯಾಪ್ತಿಗೆ ಸೇರುವ ಗಡಿಯಲ್ಲಿ ರಸ್ತೆ ಬಂದ್ ಮಾಡುವಂತೆ ಸೂಚಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಸ್ತೆಯ ಗಡಿಯಲ್ಲಿ ವಿವಾದ ಉಂಟಾಗಿತ್ತು. ವಿಟ್ಲ ಪೋಲೀಸರು ರಸ್ತೆ ಬಂದ್ ಮಾಡಿದ ಕೇರಳಕ್ಕೆ ಸೇರಿದ್ದು ಎಂದು ಅವರ ವಾದವಾಗಿತ್ತು. ಆದರೆ ಈ ವಿವಾದನ್ನು ಬಗೆಹರಿಸಲು ಸ್ವತಃ ತಹಶೀಲ್ದಾರ್ ಅವರೇ ಮುತುವರ್ಜಿಯಿಂದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕೊರೊನಾ ವೈರಸ್ ತಡೆಗೆ ತಾಲೂಕಿನ ಎಲ್ಲಾ ಅಧಿಕಾರಿಗಳು ಸಮರೋಪಾಧಿಯಲ್ಲಿ ಕರ್ತವ್ಯ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಸೂಚನೆ ನೀಡಿದ್ದಾರೆ. ಆದರೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪಿ.ಡಿ.ಒ.ಗಳು ಹಾಗೂ ಟಾಸ್ಕಪೋರ್ಸ್ ಸಮಿತಿ ಯ ಅಧಿಕಾರಿ ವರ್ಗದವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೇರಳ ರಸ್ತೆ ಗಡಿ ಬಂದ್ ವಿಚಾರದಲ್ಲೂ ಕೂಡ ಪೋಲೀಸರು ಸ್ಥಳಕ್ಕೆ ಬಂದು ಕರ್ತವ್ಯ ಮಾಡುತ್ತಾರೆ ಅದರೆ ಅದಕ್ಕೆ ಸಂಬಂಧಿಸಿದ ಈ ಭಾಗದ ಅಧಿಕಾರಿ ಗಳು ಮಾತ್ರ ಬರುವುದೇ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕೊನೆಗೆ ತಹಶೀಲ್ದಾರ್ ಅವರೇ ಅಧಿತ್ಯವಾರ ಬೆಳ್ಳಂಬೆಳಿಗ್ಗೆ ಸ್ಥಳಕ್ಕೆ ಬರಬೇಕಾಯಿತು ಎಂದು ಅಲ್ಲಿನ‌ ಜನ ಹೇಳುತ್ತಾರೆ.

- Advertisement -
spot_img

Latest News

error: Content is protected !!