- Advertisement -
![]()
- Advertisement -
ಬಂಟ್ವಾಳ: ಗ್ಯಾಸ್ ಪಂಪ್ ಏಜೆನ್ಸಿಯ ಒಳಗೆ ಪ್ರವೇಶಿಸಿ ಸಿಬ್ಬಂದಿಗೆ ಆಟೋ ಚಾಲಕ ಹಲ್ಲೆ ನಡೆಸಿದ ಘಟನೆ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೊಗೋಡಿ ಎಂಬಲ್ಲಿ ನಡೆದಿದೆ.
ದಿನಾಂಕ: 20.03.2026ರಂದು ಸಂಜೆ ಕೆಎ 19 ಎಸಿ 2102 ನೇ ನೊಂದಾವಣಿ ಸಂಖ್ಯೆಯ ಆಟೊರಿಕ್ಷಾವನ್ನು ಚಾಲಕ ಚಲಾಯಿಸಿಕೊಂಡು ಬಂದು, ಗ್ಯಾಸ್ ಪಂಪ್ ಏಜೆನ್ಸಿಯ ಒಳಗೆ ಪ್ರವೇಶಿಸಿ ಕಛೇರಿ ಸಿಬ್ಬಂದಿ ಅಶ್ವಿನ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುತ್ತಾನೆ. ನಂತರ ಹೊರಬಂದು ಗ್ಯಾಸ್ ಪಂಪ್ ಏಜೆನ್ಸಿಯ ಸೊತ್ತುಗಳಿಗೆ ಹಾನಿ ಮಾಡಿ ರೂ: 48,000/- ಗಳಷ್ಟು ನಷ್ಟ ಉಂಟು ಮಾಡಿರುತ್ತಾನೆ ಎಂಬುದಾಗಿ ಗ್ಯಾಸ್ ಪಂಪ್ ಏಜೆನ್ಸಿಯ ಮ್ಯಾನೇಜರ್ ಕುನಲ್ ಭುಹ್ನಿಯಾ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -


