Wednesday, June 24, 2026
Homeಕರಾವಳಿಕಾಸರಗೋಡುನಿಷೇಧಿತ ದುಬಾರಿ ಪಾನ್ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಇಬ್ಬರ ಬಂಧನ

ನಿಷೇಧಿತ ದುಬಾರಿ ಪಾನ್ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು: ನಿಷೇಧಿತ ದುಬಾರಿ ಪಾನ್ ಮಸಾಲ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಇಬ್ಬರನ್ನು  ಬಂಧಿಸಲಾಗಿದೆ.

 ವಿದ್ಯಾನಗರ ಠಾಣಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನೂಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ  ದಾಳಿ ಇಬ್ಬರನ್ನು ಬಂಧಿಸಿದೆ. ಮುಟ್ಟತ್ತೋಡಿ ಚೆಟ್ಟುಂಗುಯಿ ಪಳ್ಳಂ ಹೌಸ್ ನ ಪಿ.ಎಚ್ ಕಮರುದ್ದೀನ್ ( 36) ಮತ್ತು ಚೆಟ್ಟುಂಗುಯಿಯ ರಿಷಾದ್ ಎಂ.ಸಿ ( 29) ಬಂಧಿತ ಆರೋಪಿಗಳು.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಚೆಟ್ಟುಂಗುಯಿಯಲ್ಲಿನ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದಾಗ ಪಾನ್ ಮಸಾಲ ಉತ್ಪನ್ನಗಳ ಅಕ್ರಮ ದಾಸ್ತಾನು ಪತ್ತೆಯಾಗಿದೆ. ಹತ್ತಕ್ಕೂ ಅಧಿಕ ಪ್ಲಾಸ್ಟಿಕ್ ಗೋಣಿಗಳಲ್ಲಿ ತುಂಬಿಸಿಡಲಾಗಿತ್ತು. ಇದನ್ನು ಜಿಲ್ಲೆಯ ವಿವಿದೆಧೆಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಕರ್ನಾಟಕದಿಂದ ತಂದು ಈ ಬಾಡಿಗೆ ಮನೆಯಲ್ಲಿ ದಾಸ್ತಾನಿಟ್ಟು ಬಳಿಕ ಹಲವೆಡೆ ಮಾರಾಟ ಮಾಡುತ್ತಿದ್ದರು. ವಶಪಡಿಸಿಕೊಂಡ ಉತ್ಪನ್ನಗಳ ಮೌಲ್ಯ ಸುಮಾರು ಮೂರುವರೆ ಲಕ್ಷ ರೂ . ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!