Wednesday, June 24, 2026
Homeತಾಜಾ ಸುದ್ದಿಬೆಕ್ಕಿನ ಮರಿಗೆ ಪೈಯಿಂಟ್ ಮಾಡಿ ಹುಲಿ ಮರಿ ಬಿಂಬಿಸಿ ಮಾರಾಟ ಮಾಡಲು ಯತ್ನಿಸಿದಾತ ಅಂದರ್

ಬೆಕ್ಕಿನ ಮರಿಗೆ ಪೈಯಿಂಟ್ ಮಾಡಿ ಹುಲಿ ಮರಿ ಬಿಂಬಿಸಿ ಮಾರಾಟ ಮಾಡಲು ಯತ್ನಿಸಿದಾತ ಅಂದರ್

- Advertisement -
- Advertisement -

ತಮಿಳುನಾಡು: ಬೆಕ್ಕಿನ ಮರಿಗಳಿಗೆ ಹುಲಿ ಮರಿಗಳಂತೆ ಪೈಯಿಂಟ್ ಮಾಡಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಅಂದರ್ ಆಗಿದ್ದಾರೆ.

 ಬಿಳಿ ಹುಲಿಗಳು ಸೇರಿದಂತೆ ಹುಲಿ ಮರಿಗಳು ₹ 25 ಲಕ್ಷ ಮೊತ್ತಕ್ಕೆ ಲಭ್ಯವಿವೆ ಎಂದು ಫೇಸ್ಬುಕ್ ಮತ್ತು ವಾಟ್ಸಾಪ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ  ಜಾಹೀರಾತು ನೀಡಿದ್ದಕ್ಕಾಗಿ 24 ವರ್ಷದ ಪಾರ್ಥಿಬನ್ ಮತ್ತು ಅವನ ಸಹಚರ ಅಂಬತ್ತೂರಿನ ತಮಿಳ್ ಎಂಬವರನ್ನು ವೆಲ್ಲೂರು ಅರಣ್ಯ ವಿಭಾಗವು ಬಂಧಿಸಿದೆ.

ಚೆನ್ನೈ ಮೂಲದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋದ ಆದೇಶದ ಆಧಾರದ ಮೇಲೆ, ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಪ್ರಿನ್ಸ್ ಕುಮಾರ್ ನೇತೃತ್ವದ ಅಧಿಕಾರಿಗಳು ಒಂದು ವಾರಗಳ ಕಾಲ ತನಿಖೆ ನಡೆಸಿ ಕೆಲವು ದಿನಗಳ ಹಿಂದೆ ಶಂಕಿತರನ್ನು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಪಾರ್ಥಿಬನ್ ಅಪರಾಧವನ್ನು ಒಪ್ಪಿಕೊಂಡಿದ್ದು ಮತ್ತು ತಾನು ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಮಾರಾಟವು ಅಂಬತ್ತೂರಿನ ತಮಿಳ್ ಪ್ಲ್ಯಾನ್ ಎಂದು ಅವನು ಹೇಳಿದ್ದಾನೆ.

- Advertisement -

Latest News

error: Content is protected !!