Sunday, May 12, 2024
Homeಕರಾವಳಿಬ್ಯಾಂಕ್ ಲೋನ್ ಪಡೆದು ವಾಪಸ್ ಕಟ್ಟದೆ ಬ್ಯಾಂಕ್ ಗೆ ವಂಚನೆ: ಬೆಳ್ತಂಗಡಿಯ ವಿಘ್ನೇಶ್ ಸಿಟಿ ಕಟ್ಟಡ...

ಬ್ಯಾಂಕ್ ಲೋನ್ ಪಡೆದು ವಾಪಸ್ ಕಟ್ಟದೆ ಬ್ಯಾಂಕ್ ಗೆ ವಂಚನೆ: ಬೆಳ್ತಂಗಡಿಯ ವಿಘ್ನೇಶ್ ಸಿಟಿ ಕಟ್ಟಡ ನಾಳೆ ಜಪ್ತಿ :  ಬೀದಿಗೆ ಬಿದ್ದ ಕಟ್ಟಡದಲ್ಲಿ ಅಂಗಡಿ ಹೊಂದಿರುವ ಮಾಲೀಕರು

spot_img
- Advertisement -
- Advertisement -

ಬೆಳ್ತಂಗಡಿ : ಕಟ್ಟಡ ನಿರ್ಮಾಣ ಮಾಡಲು ಮುಂಬಯಿ ಮೂಲದ ಬ್ಯಾಂಕ್ ನಿಂದ ಸಾಲ ಪಡೆದು ವಾಪಸ್ ನೀಡದೆ ವಂಚನೆ ಮಾಡಿದ್ದಕ್ಕಾಗಿ ಬೆಳ್ತಂಗಡಿ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ವಿಘ್ನೇಶ್ ಸಿಟಿ ಕಟ್ಟಡವನ್ನು ಬ್ಯಾಂಕ್ ಬೆಳಗ್ಗೆ 11 ಗಂಟೆಗೆ ವಶಕ್ಕೆ ಪಡೆಯಲಿದೆ.

ಬೆಳ್ತಂಗಡಿ ನಗರದ ಕಲ್ಲಗುಡ್ಡೆ ಬಳಿ ಇರುವ ರವಿ ಕುಮಾರ್ ಎಂಬವರು “ವಿಘ್ನೇಶ್ ಕಾನ್ಟ್ರಕ್ಷನ್ ” PWD ಕಂಟ್ರ್ಯಾಕ್ಟರ್ & ಅರ್ಥ್ ಮೂವರ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದು,  ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ “ವಿಘ್ನೇಶ್ ಸಿಟಿ “ಎಂಬ ಹೆಸರಿನ ಕಟ್ಟಡ ನಿರ್ಮಾಣಕ್ಕೆ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಆದ್ರೆ ಕಳೆದ ನಾಲ್ಕು ವರ್ಷಗಳಿಂದ ಬಡ್ಡಿ ಅಸಲು ಸೇರಿ ಸುಮಾರು ಆರೂವರೇ ಕೋಟಿ ಹಣವನ್ನು ಬ್ಯಾಂಕ್ ಗೆ ಕಟ್ಟದೆ ವಂಚನೆ ಮಾಡಿದ್ದಾರೆ. ಈ ಹಿನ್ನೆಲೆ  ಈ  ಕಟ್ಟಡ ಬಿಡಲು ಇಲ್ಲಿ ಬಾಡಿಗೆ ಅಂಗಡಿ ಹೊಂದಿರುವ ಎಲ್ಲಾ ಮಾಲೀಕರಿಗೆ ಮಂಗಳೂರು ಕೋರ್ಟ್ ಮುಖಾಂತರ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

NKGSB co-op ಬ್ಯಾಂಕ್ ನಿಂದ ಸಾಲ:

ಮುಂಬಯಿ ಮೂಲದ NKGSB Co-op ಬ್ಯಾಂಕ್ ಲಿಮಿಟೆಡ್‌ ನ ಮಂಗಳೂರು ಶಾಖೆಯಿಂದ ಸುಮಾರು ನಾಲ್ಕೂವರೆ ಕೋಟಿ ಕಟ್ಟಡಕ್ಕೆ ಸಾಲ ಪಡೆದು ಕಳೆದ ನಾಲ್ಕು ವರ್ಷಗಳಿಂದ ಹಣ ಕಟ್ಟದೆ ಬ್ಯಾಂಕ್ ವಂಚನೆ ಮಾಡಿದ್ದು ಇದೀಗ ಮಂಗಳೂರು ಪ್ರಿ ಸೀನಿಯರ್ ಸಿವಿಲ್ ಜಡ್ಜ್ ಕೋರ್ಟ್‌ನಿಂದ ಕಮೀಷನರ್ ನೇಮಿಸಿ ವಾರೆಂಟ್ ಹೊರಡಿಸಿದ್ದು ವಾರೆಂಟ್ ಪ್ರತಿಯನ್ನು ಬಾಡಿಗೆದಾರರ ಅಂಗಡಿಯ ಮುಂಭಾಗದಲ್ಲಿ ಅಂಟಿಸಲಾಗಿದೆ.

ನಾಳೆ ಶುಕ್ರವಾರ ಬೆಳಗ್ಗೆ ಕಟ್ಟಡ ಜಪ್ತಿ :

ಕೋರ್ಟ್ ಮುಖಾಂತರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕೋರ್ಟ್ ಕಮಿಷನರ್ ಮುಖಾಂತರ ಜಪ್ತಿ ಮಾಡಲಿದ್ದೇವೆ. ನೀವಾಗಿ ಕೋಣೆಯನ್ನು ಖಾಲಿ ಮಾಡಿ ಹೋಗಿ ಇಲ್ಲವಾದರೆ ನಾವೇ ಎಲ್ಲವನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಕಟ್ಟದಲ್ಲಿರುವ ಬಾಡಿಗೆ ಮಾಲಕರು ಕಂಗಾಲು : ವಿಘ್ನೇಶ್ ಸಿಟಿ ಕಟ್ಟಡದಲ್ಲಿ ಬೇರೆ ಬೇರೆ ವ್ಯವಹಾರ ಮಾಡಲು 35 ಕ್ಕೂ ಹೆಚ್ಚು ಅಂಗಡಿ ಕೋಣೆಗಳನ್ನು ಬಾಡಿಗೆ ನೀಡಲಾಗಿದೆ. ಇದೀಗ ಬ್ಯಾಂಕ್ ಜಪ್ತಿ ಮಾಡುವುದಾಗಿ ಎಲ್ಲರಿಗೂ ಬ್ಯಾಂಕ್ ನೋಟಿಸ್ ನೀಡಲಾಗಿದ್ದು ಇದರಿಂದ ಡೆಪೋಸಿಟ್ ನೀಡಿದ ಹಣ ಕೂಡ ವಾಪಸ್ ಬರೋದು ಸಂದೇಹ ಎನ್ನುತ್ತಿದ್ದಾರೆ ಅಂಗಡಿ ಮಾಲೀಕರು. ಈ ಕಟ್ಟಡದಲ್ಲಿ ನಾಲ್ಕು ಅಂಗಡಿ ಮಾತ್ರ ಓನರ್ ಶೀಪ್ ಗೆ ಲೋನ್‌ ಮಾಡುವ ಮೊದಲೇ ಪಡೆದುಕೊಂಡಿದ್ದು ಅವರಿಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ.

ಬಾಡಿಗೆ ಪಡೆದ 35 ಕ್ಕೂ ಅಧಿಕ ಅಂಗಡಿ ಮಾಲೀಕರು ಬ್ಯಾಂಕ್ ಅಧಿಕಾರಿಗಳೊಂದಿಗೆ ಈ ಬಗ್ಗೆ  ಮಾತುಕತೆ ನಡೆಸಿದ್ದು, ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಖಾಲಿ ಮಾಡಲೇಬೇಕು. ಹರಾಜು ಅಗುವ ವೇಳೆ ಬೇಕಾದರೆ ಓನರ್ ಶೀಪ್ ನಲ್ಲಿ ಪಡೆಯಬಹುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಟ್ಟಡದಲ್ಲಿರುವ ಹಲವು ಅಂಗಡಿ ಮಾಲೀಕರು ಬೇರೆಡೆ ತಮ್ಮ ಅಂಗಡಿಯ ವಸ್ತುಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ

- Advertisement -
spot_img

Latest News

error: Content is protected !!