Monday, May 6, 2024
Homeತಾಜಾ ಸುದ್ದಿಕೆಲವರಿಗೆ ಲಾಕ್ ಡೌನ್ ಚಿಂತೆ, ಇನ್ನೂ ಹಲವರಿಗೆ ಮದ್ಯದ ಚಿಂತೆ, ಬೆಂಗಳೂರಿನಲ್ಲಿ ಬಹುತೇಕ ಬಾರ್ ಗಳಲ್ಲಿ...

ಕೆಲವರಿಗೆ ಲಾಕ್ ಡೌನ್ ಚಿಂತೆ, ಇನ್ನೂ ಹಲವರಿಗೆ ಮದ್ಯದ ಚಿಂತೆ, ಬೆಂಗಳೂರಿನಲ್ಲಿ ಬಹುತೇಕ ಬಾರ್ ಗಳಲ್ಲಿ ಸ್ಟಾಕ್ಸ್ ಖಾಲಿ..

spot_img
- Advertisement -
- Advertisement -

ಬೆಂಗಳೂರು : ಮಂಗಳವಾರ ಅಂದರೆ ನಾಳೆ ರಾತ್ರಿ 8 ಗಂಟೆಯಿಂದ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ. ಹಾಗಾಗಿ ಒಂದು ಕಡೆ ಬೆಂಗಳೂರು ಸಹವಾಸ ಸಾಕಪ್ಪಾ ಅಂತಾ ಜನ ಬೆಂಗಳೂರು ತೆರೆದು ಊರಿನತ್ತ ಮುಖ ಮಾಡುತ್ತಿದ್ದರೆ, ಮತ್ತೊಂದು ಕಡೆ ಒಂದಷ್ಟು ಜನ ಒಂದು ವಾರಕ್ಕೆ ಆಗುವಷ್ಟು ದಿನಸಿ ಪದಾರ್ಥಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ ಇದೆಲ್ಲದರ ಮಧ್ಯೆ ಪಾಪ! ನಮ್ಮ ಮದ್ಯ ಪ್ರಿಯರು ಸಿಕ್ಕಾಪಟ್ಟೆ ಕಷ್ಟ ಪಡುತ್ತಿದ್ದಾರೆ. ಹಿಂದೆ ಲಾಕ್ ಡೌನ್ ಆದಾಗ ಕುಡಿಯೋಕೆ ಸಿಗದೇ ಜನ ಹೇಗೆಲ್ಲಾ ಪರದಾಡಿದ್ರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಹಾಗಾಗಿ ಈ ಸಲ ಹಾಗಾಗೋದು ಬೇಡ ಅಂತಾ ಜನ ಭರ್ಜರಿಯಾಗಿಯೇ ಮದ್ಯ ಸ್ಟಾಕ್ ಮಾಡಿ ಇಟ್ಟುಕೊಳ್ಳುತ್ತಿದ್ದಾರೆ. ನಗರದ ಪ್ರಮುಖ ಔಟ್ ಲೆಟ್ ಗಳಲ್ಲಿ ಮದ್ಯ ಖರೀದಿ ಭಾರೀ ಜೋರಾಗಿಯೇ ನಡೆಯುತ್ತಿದೆ.

ಕುಟುಂಬವೊಂದರಿಂದ ಇಬ್ಬರು ಮೂವರು ಎಂಬಂತೆ ಬಂದು ಮದ್ಯ ಖರೀದಿಸುತ್ತಿದ್ದಾರೆ. ಹಾಗಾಗಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸ್ಟಾಕ್ಸ್ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮದ್ಯ ಮಾರಾಟ ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!