Saturday, June 6, 2026
Homeಕರಾವಳಿಮಂಗಳೂರು; ಬಾಲಕಿಯ ಪತ್ತೆಗಾಗಿ‌ ಮನವಿ

ಮಂಗಳೂರು; ಬಾಲಕಿಯ ಪತ್ತೆಗಾಗಿ‌ ಮನವಿ

- Advertisement -
- Advertisement -

ಮಂಗಳೂರು: ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಿಂದ ಭಾರ್ಗವಿ (14) ಎಂಬ ಬಾಲಕಿ ಸೋಮವಾರ ನಾಪತ್ತೆಯಾಗಿದ್ದು ಆಕೆ ಮಂಗಳೂರಿಗೆ ಆಗಮಿಸಿ, ನಾನಾ ಕಡೆ ತಿರುಗಾಡಿದ ಬಗ್ಗೆ ಮಾಹಿತಿ ಲಭಿಸಿದೆ.


ಬೆಂಗಳೂರಿನಿಂದ ಬಸ್ ಮೂಲಕ ಬೆಳಗ್ಗಿನ ಜಾವ 3 ಗಂಟೆಗೆ ಮಂಗಳೂರಿನ ಕೆಎಸ್ಸಾರ್ಟಿಗೆ  ಭಾರ್ಗವಿ ಆಗಮಿಸಿದ್ದಾಳೆ. ಅಲ್ಲಿಂದ ರಿಕ್ಷಾವೊಂದನ್ನು ಬಾಡಿಗೆಗೆ ಗೊತ್ತುಪಡಿಸಿ ಮುಕ್ಕ ಬೀಚ್ ಗೆ, ಕದ್ರಿ ಪಾರ್ಕ್ ತಿರುಗಿದ್ದಾಳೆ.

ಅಲ್ಲಿಂದ ರಿಕ್ಷಾದಲ್ಲಿ ಮತ್ತೆ ಕೆಎಸ್ಸಾರ್ಟಿಸಿಗೆ ಮರಳಿ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ರಿಕ್ಷಾ ಚಾಲಕನ ಬಳಿ ಹೇಳಿ ಬಾಡಿಗೆ ನೀಡಿ ತೆರಳಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೀಗ ಆಕೆಯ ಬಗ್ಗೆ ಮಾಹಿತಿ‌ ದೊರೆತೆರೆ ತಿಳಿಸುವಂತೆ ಪೊಲೀಸರು‌ ಮನವಿ‌‌ ಮಾಡಿದ್ದಾರೆ. ಇನ್ನು ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು‌ ಕೂಡ ಟ್ವೀಟ್‌ ಮೂಲಕ‌ ಮನವಿ‌ ಮಾಡಿದ್ದಾರೆ.

- Advertisement -

Latest News

error: Content is protected !!