Thursday, June 4, 2026
Homeತಾಜಾ ಸುದ್ದಿಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ನಿಷೇಧ ಹೇರಿ; ವಾಟಳ್‌ ನಾಗರಾಜ್‌ ಆಗ್ರಹ

ಸೋನು ನಿಗಮ್‌ಗೆ ಕನ್ನಡ ಚಿತ್ರರಂಗದಿಂದ ನಿಷೇಧ ಹೇರಿ; ವಾಟಳ್‌ ನಾಗರಾಜ್‌ ಆಗ್ರಹ

- Advertisement -
- Advertisement -

ಮೈಸೂರು : ಗಾಯಕ ಸೋನು ನಿಗಮ್ ಬೆಂಗಳೂರಿನ ಕಾಲೇಜೊಂದರಲ್ಲಿ ಕನ್ನಡಿಗ ಹಾಗೂ ಕನ್ನಡತನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದನ್ನ ಖಂಡಿಸಿ ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಗೆ ನಿಷೇಧ ಹೇರಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಅವರು ಭಾನುವಾರದಂದು ಮೈಸೂರಿನ ಹಾರ್ಡಿಂಜ್‌ ವೃತ್ತದ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸೋನು ನಿಗಮ್‌ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಚಿತ್ರಗೀತೆಗಳಲ್ಲಿ ಕನ್ನಡ ಪ್ರತಿಭೆಗಳಿಗೆ ಅವಕಾಶ ಕೊಡಬೇಕು. ಅದರ ಹೊರತಾಗಿ ಅನ್ಯ ಭಾಷೆಯ ಗಾಯಕರಲ್ಲಿ ಹಾಡಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಭಾಷೆಯ ಗಾಯಕರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕು. ಬೇರೆ ರಾಜ್ಯದ ಗಾಯಕರಿಂದ ಹಾಡಿಸುವುದನ್ನು ನಮ್ಮ ಚಿತ್ರರಂಗ ನಿಲ್ಲಿಸಬೇಕು. ಸೋನು ನಿಗಮ್ ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲೇ ಪೊಲೀಸರು ಬಂಧಿಸಿ ಜೈಲಿನಲ್ಲಿಡಬೇಕು ಎಂದು ಒತ್ತಾಯಿಸಿದರು

- Advertisement -

Latest News

error: Content is protected !!