Saturday, June 6, 2026
Homeಅಪರಾಧಮಂಗಳೂರು: ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ- ಆರೋಪಿಗಳಿಗೆ ಶರತ್ತುಬದ್ದ ಜಾಮೀನು ಮಂಜೂರು

ಮಂಗಳೂರು: ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣ- ಆರೋಪಿಗಳಿಗೆ ಶರತ್ತುಬದ್ದ ಜಾಮೀನು ಮಂಜೂರು

- Advertisement -
- Advertisement -

ಮಂಗಳೂರು: ಕೂಳೂರು ಸಮೀಪದ ಪಂಜಿನಮೊಗರು ಉರುಂದಾಡಿ ಗುಡ್ಡೆಯಲ್ಲಿ ಪ್ರಾರ್ಥನಾ ಮಂದಿರ ಧ್ವಂಸ ಪ್ರಕರಣದ ಆರೋಪದಲ್ಲಿ ಕಾವೂರು ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಆರೋಪಿಗಳಿಗೆ ಶರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ.

ಆರೋಪಿಗಳಾದ ಬಜಪೆ ನಿವಾಸಿ ಲತೀಶ್ (25), ಕಾವೂರು ಉರುಂದಾಡಿ‌ ನಿವಾಸಿ ಧನಂಜಯ (36)ರನ್ನು ಬಂಧಿಸಿದ್ದರು .

ಬಂಧಿತರ ಜಾಮೀನು ಅರ್ಜಿ ಸ್ವೀಕರಿಸಿದ ಮಂಗಳೂರಿನ 3 ನೇ ಜೆ.ಎಮ್.ಎಫ್ ಸಿ ನ್ಯಾಯಾಲಯ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ಮಂಗಳೂರಿನ ವಕೀಲರಾದ ಶ್ರೇಯಸ್.ಎಸ್.ಕೆ ,ಮತ್ತು ಹರ್ಷಿತ್ .ಎ.ಎಸ್ ಅವರು ವಾದಿಸಿದ್ದಾರೆ.

- Advertisement -

Latest News

error: Content is protected !!