Friday, April 26, 2024
Homeಆರಾಧನಾನಾಳೆಯಿಂದ ಬದಿಗುಡ್ಡೆ ವಾರಾಟ ಮಾಡ ಕಾಲಾವಧಿ ವಲಸರಿ ನೇಮ; ಬೆಳಗ್ಗೆ ಗೊನೆ ಮುಹೂರ್ತ

ನಾಳೆಯಿಂದ ಬದಿಗುಡ್ಡೆ ವಾರಾಟ ಮಾಡ ಕಾಲಾವಧಿ ವಲಸರಿ ನೇಮ; ಬೆಳಗ್ಗೆ ಗೊನೆ ಮುಹೂರ್ತ

spot_img
- Advertisement -
- Advertisement -

ಬಂಟ್ವಾಳ: ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ, ಮಲೆಕೊರತಿ ದೈವಗಳ ವಲಸರಿ ನೇಮೋತ್ಸವವು ಏಪ್ರಿಲ್ 21 ಗುರುವಾರದಂದು ಆರಂಭಗೊಂಡು 28ರ ವರೆಗೆ ಬದಿಗುಡ್ಡೆ ವಾರಾಟ ಮಾಡ ಮಾಣಿಯಲ್ಲಿ ನಡೆಯಲಿದೆ.


ದಿನಾಂಕ 21ನೇ ಗುರುವಾರ 10:30 ರ ಸಮಯಕ್ಕೆ ಗೊನೆ ಮಹೂರ್ತ ನಡೆಯಲಿದೆ, 28ನೇ ಗುರುವಾರ ಬೆಳಿಗ್ಗೆ  9ರ ಸಮಯಕ್ಕೆ ಮಾಣಿಗುತ್ತಿನಿಂದ ದೈವದ ಭಂಡಾರ ಹೊರಟು, 10ಕ್ಕೆ ಬದಿಗುಡ್ಡೆ ವಾರಾಟ ಮಾಡಕ್ಕೆ ಬರಲಾಗುವುದು.
ಬೆಳಿಗ್ಗೆ ಸಮಯ 11ಕ್ಕೆ ಗಣಹೋಮ  ನಡೆಯಲಿದ್ದು, ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ದೈವಗಳಿಗೆ ತಂಬಿಲ ಸೇವೆ, ಹೂವಿನ ಪೂಜೆ ಮತ್ತು ಮಹಾಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.


ರಾತ್ರಿ 8ರಿಂದ ಶ್ರೀ ಅರಸು ಗುಡ್ಡೆ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆಕೊರತಿ ದೈವಗಳ ನೇಮೋತ್ಸವ ನಡೆಯಲಾಗುವುದು.


ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸುವಂತೆ ಸಚಿನ್ ರೈ ಮಾಣಿಗುತ್ತು, ಜಗನ್ನಾಥ ಚೌಟ ಬದಿಗುಡ್ಡೆ, ರಾಧಾಕೃಷ್ಣ ಶೆಟ್ಟಿ ಬದಿಗುಡ್ಡೆ, ಶ್ರೀ ಗುಡ್ಡ ಶೆಟ್ಟಿ, ರತ್ನಾಕರ ಭಂಡಾರಿ ಅರೆಬೆಟ್ಟು ಗುತ್ತು, ಅರ್ಚಕರಾದ ಅನಂತ ಭಟ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!