Thursday, June 4, 2026
Homeಕರಾವಳಿಉಡುಪಿಉಡುಪಿ: ನೆರೆ ಪ್ರದೇಶದಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆ

ಉಡುಪಿ: ನೆರೆ ಪ್ರದೇಶದಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆ

- Advertisement -
- Advertisement -

ಣೆ

ಉಡುಪಿ: ಬ್ರಹ್ಮಾವರ ತಾಲ್ಲೂಕು ಕೋಟದ ಬಳಿ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ರುಮನೆ ಎಂಬಲ್ಲಿ ನೆರೆ ಪ್ರದೇಶದ ಮನೆಯೊಂದರಲ್ಲಿ ಚಿಕ್ಕ ಮಗುವಿನೊಂದಿಗೆ ಕುಟುಂಬ ಅಪಾಯದಲ್ಲಿ ಸಿಲುಕಿಕೊಂಡಿತ್ತು.

ವಿಷಯ ತಿಳಿದ ಕೂಡಲೇ ಕೋಟ ಕಂದಾಯ ನೀರೀಕ್ಷಕ ರಾಜು ಅವರು ನೀಡಿದ ಮಾಹಿತಿಯಂತೆ ಬ್ರಹ್ಮಾವರ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಲುವಿಸ್ ಅವರ ತಂಡ ಬೋಟ್ ಮೂಲಕ ಹೋಗಿ ಅಪಾಯದಿಂದ ಮಗು ಹಾಗೂ ಅವರ ತಂದೆ ತಾಯಿಯನ್ನು ಪಾರು ಮಾಡಿದ ಘಟನೆ ಇಂದು ಕುದ್ರುಮನೆಯಲ್ಲಿ ನಡೆದಿದೆ.

ಮಗುವಿನ ತಾಯಿ ಅಮೃತ ಮತ್ತು ಪತಿ ಸತ್ಯ ಅವರನ್ನು ಬ್ರಹ್ಮಾವರ ಗೃಹರಕ್ಷಕದಳದ ನೆರೆ ರಕ್ಷಣಾ ತಂಡದ ಸಿಬ್ಬಂದಿಯವರಾದ ಸಂದೇಶ್, ಚಂದ್ರಶೇಖರ್, ವೆಂಕಟೇಶ್ವರ, ಕಾರ್ತಿಕ್ ರವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರಿಸಿದರು. ಕೆಲವು ದಿನದಿಂದ ವಿದ್ಯುತ್ ಕೂಡಾ ಇಲ್ಲದ ಮನೆಗಳಿಗೆ ಮೆಸ್ಕಾಂ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಸಂಪರ್ಕ ಕಲ್ಪಿಸಲು ಕೂಡಾ ನೆರವಾದರು.

ಈ ವೇಳೆ ವಡ್ಡರ್ಸೆ ಗ್ರಾಮ ಲೆಕ್ಕಾಧಿಕಾರಿ ವಿಜಯ ಕುಮಾರ್, ಪಂಚಾಯತ್ ಅಧ್ಯಕ್ಷೆ ರಮ್ಯಾ ಹಾಗೂ ಸಿಬ್ಬಂದಿ ಇದ್ದರು

- Advertisement -

Latest News

error: Content is protected !!