Thursday, June 25, 2026
Homeಕರಾವಳಿಸುಳ್ಯದಲ್ಲಿ‌ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಸುಳ್ಯದಲ್ಲಿ‌ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

- Advertisement -
- Advertisement -

ಸುಳ್ಯ: ಗರ್ಭಿಣಿಯೊಬ್ಬರು  ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆ ತರುವ ವೇಳೆ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಸುಳ್ಯದಲ್ಲಿ ಇಂದು ಮುಂಜಾನೆ ನಡೆದಿದೆ.

ಅರಂಬೂರು ನಿವಾಸಿ ಅಯಾಜ್ ಎಂಬವರ ಪತ್ನಿ ಸಫಿಯಾ ಕಾರಿನಲ್ಲಿ ಹೆರಿಗೆಯಾದ ಮಹಿಳೆ. ಈಕೆ ನಿನ್ನೆ ಪುತ್ತೂರಿನ ಸಂಬಂಧಿಕರ ಮನೆಗೆ ಸಫಿಯಾ ಮತ್ತು ಮನೆಯವರು ತೆರಳಿದ್ದು ರಾತ್ರಿ ಹನ್ನೊಂದು ಗಂಟೆಗೆ ಅರಂಬೂರಿನ ಅವರ ಮನೆಗೆ ಬಂದಿದ್ದರು.

ರಾತ್ರಿ 2:30ರ ಸಮಯದಲ್ಲಿ ಸಫಿಯಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ವೈದ್ಯರು ನೀಡಿದ ದಿನಾಂಕ ಇನ್ನು ಎಂಟು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಂದಿದ್ದರು. ಆದರೆ ಸುಳ್ಯ ಕೆವಿಜಿ ಆಸ್ಪತ್ರೆಗೆ ತಲುಪುತ್ತಿದ್ದಂತೆ ಹೆರಿಗೆ ನೋವು ಜಾಸ್ತಿಯಾಗಿ ಅವರನ್ನು ಕರೆದುಕೊಂಡು ಬರುತ್ತಿದ್ದ ಆಲ್ಟೊ ಕಾರಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರ ತಂಡ ಕೂಡಲೇ ಕಾರ್ಯಪ್ರವೃತ್ತರಾಗಿ ತಾಯಿ ಮತ್ತು ಮಗುವಿಗೆ ಆರೈಕೆಯನ್ನು ನೀಡಿದ್ದು, ಇಬ್ಬರೂ ಆರೋಗ್ಯವಂತರಾಗಿದ್ದಾರೆ.


- Advertisement -

Latest News

error: Content is protected !!