- Advertisement -
![]()
- Advertisement -
ಲಕ್ನೋ : ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ನಾಳೆ ಪ್ರಕಟವಾಗುತ್ತಿದೆ. ವಿಶೇಷ ಸಿಬಿಐ ಕೋರ್ಟ್ ಈ ಪ್ರಕರಣದ ತೀರ್ಪು ನೀಡಲಿದೆ. ಎಲ್ಲಾ ಆರೋಪಿಗಳು ಖುದ್ದಾಗಿ ಕೋರ್ಟ್ ಗೆ ಹಾಜರಿರಬೇಕೆಂದು ಸಿಬಿಐ ವಿಶೇಷ ನ್ಯಾಯಮೂರ್ತಿ ಎಸ್.ಕೆ. ಯಾದವ್ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ನೋದಲ್ಲಿ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಜನರು ಆರೋಪಿಗಳಿದ್ದರು. ಆದರೆ ಅದರಲ್ಲಿ 17 ಜನ ಈಗಾಗಲೇ ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾಭಾರತಿ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ 32 ಜನ ಆರೋಪಿಗಳಾಗಿದ್ದಾರೆ. ಉಮಾಭಾರತಿ ಅವರಿಗೆ ಈಗಾಗಲೇ ಕೊರೋನಾ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ವಿನಾಯಿತಿ ಸಿಗುವ ಸಂಭವವಿದೆ.
- Advertisement -


