Thursday, June 4, 2026
Homeತಾಜಾ ಸುದ್ದಿಕೊರೋನ ಮಧ್ಯೆ ಆಘಾತಕಾರಿ ವರದಿ: ದೇಶಕ್ಕೆ ಹೊಸ ವೈರಸ್‌ ಎಂಟ್ರಿ, ಕರ್ನಾಟಕದಲ್ಲಿ 2 ಪ್ರಕರಣ

ಕೊರೋನ ಮಧ್ಯೆ ಆಘಾತಕಾರಿ ವರದಿ: ದೇಶಕ್ಕೆ ಹೊಸ ವೈರಸ್‌ ಎಂಟ್ರಿ, ಕರ್ನಾಟಕದಲ್ಲಿ 2 ಪ್ರಕರಣ

- Advertisement -
- Advertisement -

ನವದೆಹಲಿ: ಕೊರೋನ ವೈರಸ್​ ಬೆಂಬಿಡದೆ ಕಾಡುತ್ತಿರುವ ಈ ದಿನಗಳಲ್ಲಿ ವಿಜ್ಞಾನಿಗಳು ಮತ್ತೊಂದು ಆಘಾತಕಾರಿ ವರದಿ ನೀಡಿದ್ದಾರೆ. ಚೀನಾದ ಹೊಸದೊಂದು ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಭಾರತ ಅಷ್ಟೇ ಅಲ್ಲ… ಕರ್ನಾಟಕದಲ್ಲಿಯೂ ಈ ಹಿಂದೆ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದ್ದು ಆಘಾತ ಮೂಡಿಸಿದೆ.

ಉಣ್ಣೆ, ಸೊಳ್ಳೆ ಮೊದಲಾದ ಕೀಟಗಳಿಂದ ಹರಡುವ ರೋಗ ಇದಾಗಿದೆ. ‘ಆಥ್ರೋಪಾಡ್‌-ಬೋರ್ನೆ’ ವೈರಸ್‌ಗಳಲ್ಲಿ ಒಂದಾದ ಈ ವೈರಸ್​ ಹಂದಿಗಳು ಹಾಗೂ ಕ್ಯೂಲೆಕ್ಸ್‌ ಸೊಳ್ಳೆಗಳಲ್ಲಿ ಅಡಗಿದ್ದು, ಚೀನಾ ಮತ್ತು ವಿಯೆಟ್ನಾಂಗಳಲ್ಲಿ ಹೆಚ್ಚಾಗಿ ಕಂಡು ಬಂದಿವೆ.

ದೇಶದಲ್ಲಿ ಸದ್ಯ ಕೊರೋನ ವೈರಸ್‌ ಪ್ರಕರಣಗಳ ಸಂಖ್ಯೆ 60 ಲಕ್ಷ ದಾಟಿದೆ. ಆದರೆ ಈ ಮಧ್ಯಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ವಿಜ್ಞಾನಿಗಳು ನೀಡಿದ ಮಾಹಿತಿ ಪ್ರಕಾರ, ಚೀನ ದಿಂದ ‘ಕ್ಯಾಟ್‌ ಕ್ಯೂ ವೈರಸ್‌ (Cat Que Virus-CQV)’ ಭಾರತ ಪ್ರವೇಶಿಸಿದೆ. ಕರ್ನಾಟಕದಲ್ಲಿ ನಡೆಸಲಾಗಿರುವ ಎರಡು ಮಾದರಿ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.

ಇದಕ್ಕಾಗಿ ವಿವಿಧ ರಾಜ್ಯಗಳಲ್ಲಿ ನಡೆಸಲಾದ 883 ಮಾನವ ಸೆರಮ್‌ ಮಾದರಿಗಳ ಪರೀಕ್ಷೆಗಳ ಪೈಕಿ ಎರಡು ಮಾದರಿಗಳಲ್ಲಿ ವೈರಾಣುವಿಗೆ ಪ್ರತಿಕಾಯಗಳು ಕಂಡು ಬಂದಿವೆ. ಕರ್ನಾಟಕದಲ್ಲಿ ನಡೆಸಲಾಗಿರುವ ಪರೀಕ್ಷೆಯ ಪ್ರಕಾರ, ಕರ್ನಾಟಕದ ಇಬ್ಬರಿಗೆ ಒಂದು ಹಂತದಲ್ಲಿ ಕ್ಯಾಟ್‌ ಕ್ಯೂ ವೈರಸ್‌ ತಗಲಿರುವ ಸಾಧ್ಯತೆ ಇದೆ. ನಂತರದ ದಿನಗಳಲ್ಲಿ ಕ್ಯಾಟ್‌ ಕ್ಯೂ ವೈರಸ್‌ಗೆ ಪ್ರತಿಕಾಯ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅಂದರೆ ಕರೊನಾಕ್ಕಿಂತಲೂ ಮುಂಚೆಯೇ ಈ ವೈರಸ್​ ಕರ್ನಾಟಕಕ್ಕೆ ದಾಳಿ ಇಟ್ಟಿರುವುದು ವರದಿಯಾಗಿದೆ.

- Advertisement -

Latest News

error: Content is protected !!