Thursday, June 4, 2026
Homeಕರಾವಳಿಉಡುಪಿಬ್ರಹ್ಮಾವರ: ಬಿ.ಕಾಂ. ಪದವೀಧರ ಆಯುರ್ವೇದಿಕ್ ಮತ್ತು ಅಲೋಪತಿ ವೈದ್ಯ!:ಆರೋಗ್ಯ‌ ಇಲಾಖೆ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ನಕಲಿ‌...

ಬ್ರಹ್ಮಾವರ: ಬಿ.ಕಾಂ. ಪದವೀಧರ ಆಯುರ್ವೇದಿಕ್ ಮತ್ತು ಅಲೋಪತಿ ವೈದ್ಯ!:ಆರೋಗ್ಯ‌ ಇಲಾಖೆ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ನಕಲಿ‌ ಡಾಕ್ಟರ್

- Advertisement -
- Advertisement -

ಬ್ರಹ್ಮಾವರ: ಬಿ.ಕಾಂ. ಪದವೀಧರನೋರ್ವ ಆಯುರ್ವೇದಿಕ್ ಮತ್ತು ಅಲೋಪತಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪ್ರಕರಣ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.ಉಡುಪಿ ಜಿಲ್ಲೆಯಲ್ಲಿ ಇಂದು ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ವೇಳೆ ನಕಲಿ ವೈದ್ಯ ಪತ್ತೆಯಾಗಿದ್ದಾನೆ.

ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್ ನ ಕುಂಜಾಲಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಸಂದೇಶ್ ರಾವ್ ಎಂಬಾತ ಆರೋಗ್ಯ‌ಇಲಾಖೆ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿಬಿದ್ದ ನಕಲಿ ವೈದ್ಯನಾಗಿದ್ದಾನೆ.

ಶ್ರೀ ಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕೇಂದ್ರ ನಡೆಸುತ್ತಿದ್ದ ಸಂದೇಶ್ ರಾವ್ ಬಿ.ಕಾಂ. ಪದವಿ ಪಡೆದಿದ್ದು,
ಆಯುರ್ವೇದ ಮತ್ತು ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.ಆಯುರ್ವೇದಿಕ್ ಸೆಂಟರ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಝ್ ಮಾಡಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು.

- Advertisement -

Latest News

error: Content is protected !!