Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಆಟೋ ಚಾಲಕನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಪುತ್ತೂರಿನಲ್ಲಿ ಆಟೋ ಚಾಲಕನ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಪುತ್ತೂರು : ಬನ್ನೂರು ನೀರ್ಪಾಜೆ ನಿವಾಸಿ ದಿ. ರಘುನಾಥ ರೈ ಎಂಬವರ ಪುತ್ರ ಅಟೋ ಚಾಲಕ ಸುದರ್ಶನ್ ರೈ (37) ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪುತ್ತೂರು ನಗರದ ಹೊರ ವಲಯದ ಬನ್ನೂರಿನ ನೀರ್ಪಾಜೆಯಲ್ಲಿ ನಿರ್ಮಾಣ ಹಂತದಲ್ಲಿರುವ ಅವರ ಮನೆಯ ಹಿಂಭಾಗದಲ್ಲಿರುವ ಹಳೆಯ ಮನೆಯಲ್ಲಿ ಪತ್ತೆಯಾಗಿದೆ. ಲಾಕ್‍ಡೌನ್ ಬಳಿಕ ಸುದರ್ಶನ್ ಅವರು ಮನೆಯಲ್ಲಿಯೇ ಇದ್ದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇಂದು ಮನೆಯಿಂದ ದುರ್ನಾತ ಬರುತ್ತಿತ್ತು. ಸ್ಥಳೀಯರು ಪರಿಶೀಲನೆ ನಡೆಸಿದಾಗ ಮನೆಯ ಕೊಟ್ಟಿಗೆಯಲ್ಲಿ ಸುದರ್ಶನ್ ಅವರ ಮೃತದೇಹವು ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪುತ್ತೂರು ನಗರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ, ಒಂದೂವರೆ ವರ್ಷದ ಮಗು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!