Saturday, May 18, 2024
Homeಕ್ರೀಡೆಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ಕ್ರಿಕೆಟ್​ ದಿಗ್ಗಜ ಡೀನ್​ ಜೋನ್ಸ್​ ಅವರು ಮುಂಬೈನಲ್ಲಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಡೀನ್​ ಜೋನ್ಸ್​ ಅವರು ಸದ್ಯ ನಡೆಯುತ್ತಿರುವ ಐಪಿಎಲ್​ ನಲ್ಲಿ ಪ್ರಸಾರಕರಾಗಿದ್ದರು. ಹೀಗಾಗಿ ಮುಂಬೈನಲ್ಲಿ ಇದ್ದರು. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇಂದು ಡೀನ್ ಮರ್ವಿನ್ ಜೋನ್ಸ್ ಅವರು ಮುಂಬೈನಲ್ಲಿ ಮೃತಪಟ್ಟಿದ್ದನ್ನು ಸ್ಟಾರ್ ಇಂಡಿಯಾ ದೃಢಪಡಿಸಿದೆ. ಜೋನ್ಸ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಈ ಸಂದರ್ಭದಲ್ಲಿ ಅವರೊಂದಿಗೆ ನಾವಿದ್ದೇವೆ. ಆಸ್ಟ್ರೇಲಿಯಾದ ಹೈಕಮಿಷನ್​ ಜತೆ ಸಂಪರ್ಕದಲ್ಲಿದ್ದು, ಎಲ್ಲ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಡೀನ್​ ಜೋನ್ಸ್​ ಅವರು ‘ಪ್ರೊಫೆಸರ್ ಡಿಯಾನೊ’ ಎಂದೇ ಪ್ರಸಿದ್ಧರಾಗಿದ್ದರು. ತಮ್ಮ ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಹೆಸರಾಗಿದ್ದರು.

- Advertisement -
spot_img

Latest News

error: Content is protected !!