Saturday, June 6, 2026
Homeತಾಜಾ ಸುದ್ದಿಅಭಿಮಾನಿಗಳಿಗೆ "ಮೇಘನಾ ಸರ್ಜಾ" ಅವರಿಂದ ಸ್ಪಷ್ಟೀಕರಣ!…

ಅಭಿಮಾನಿಗಳಿಗೆ “ಮೇಘನಾ ಸರ್ಜಾ” ಅವರಿಂದ ಸ್ಪಷ್ಟೀಕರಣ!…

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರು ಸರ್ಜಾ ಅಕಾಲಿಕ ಮರಣವನ್ನಪ್ಪಿದ್ದು ಚಿತ್ರರಂಗ ಸೇರಿ ಆಭಿಮಾನಿಗಳ ಅಪಾರ ನೋವಿಗೆ ಕಾರಣವಾಗಿತ್ತು. ಕುಟುಂಬ ಅದರಲ್ಲೂ ತುಂಬು ಗರ್ಭಿಣಿ ಮೇಘನಾ ಸರ್ಜಾ ನೋವಿಗೆ ಕೊನೆ ಇರಲಿಲ್ಲ ಚಿರು ಕಣ್ಮಚ್ಚಿ ತಿಂಗಳುಗಳು ಉರುಳಿದರೂ ಹಲವು ಮಾಧ್ಯಮಗಳ ಸುದ್ದಿಗಳು ಕುಟುಂಬ ವರ್ಗವನ್ನು ಕಂಗೆಡಿಸಿದೆ. ಈ ಬಗ್ಗೆ ಮೇಘನಾ ಸರ್ಜಾ ಇನ್ಸ್​ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ಸ್​ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಹಾಕಿ ಬರೆದುಕೊಂಡಿರೋ ಮೇಘನಾ, ‘ಎಲ್ಲರಿಗೂ ನಮಸ್ಕಾರ.. ನನ್ನ ಬಗ್ಗೆ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ಕೆಲ ಯುಟ್ಯೂಬ್ ಚಾನೆಲ್​ಗಳು ವೀವ್ಸ್​​ಗೋಸ್ಕರ ಫೇಕ್ ನ್ಯೂಸ್ ಹಾಕ್ತಿದ್ದಾರೆ. ನನ್ನ ಅಭಿಮಾನಿಗಳು ಮತ್ತು ಫಾಲೋವರ್ಸ್ ಯಾರೂ ಇಂತಹ ಸುದ್ದಿಗಳಿಗೆ ಕಿವಿಗೊಡಬೇಡಿ. ಈ ಎಲ್ಲದರ ಬಗ್ಗೆಯೂ ನಾನು ಆದಷ್ಟು ಬೇಗ ಮಾತನಾಡುತ್ತೇನೆ. ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ಏನೇ ಮಾಹಿತಿ ಇದ್ದರೂ, ಸ್ವತಃ ನಾನೇ ತಿಳಿಸುತ್ತೇನೆ’ ಎಂದಿದ್ದಾರೆ.

- Advertisement -

Latest News

error: Content is protected !!