Wednesday, June 3, 2026
Homeಕರಾವಳಿಬೆಳ್ತಂಗಡಿ: ಅಕ್ರಮ ಜಾನುವಾರು ಸಾಗಾಟ, ಒಬ್ಬನ ಬಂಧನ

ಬೆಳ್ತಂಗಡಿ: ಅಕ್ರಮ ಜಾನುವಾರು ಸಾಗಾಟ, ಒಬ್ಬನ ಬಂಧನ

- Advertisement -
- Advertisement -

ಬೆಳ್ತಂಗಡಿ: ಅಕ್ರಮ ಮತ್ತು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 2 ಜಾನುವಾರುಗಳನ್ನು ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರು ತಮ್ಮ ಸಿಬ್ಬಂದಿಗಳೊಂದಿಗೆ ತಾಲ್ಲೂಕಿನ ಕರಂಬಾರು ಗ್ರಾಮದ ಮಾರಾಜೆ ಕ್ರಾಸ ಬಳಿ ಮಹೇಂದ್ರ ಪಿಕ್ ಅಪ್ ವಾಹನ ಸಮೇತವಾಗಿ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.

ವಾಹನದ ಚಾಲಕ ಪ್ರಾನಿಸ್ ಪಿಂಟೋ ಬಂಧಿತ ಆರೋಪಿ.

ಶಿರ್ಲಾಲು ಕಡೆಯಿಂದ ಮಾರಾಜೆ ಕಡೆಗೆ ಒಂದು ದನ ಮತ್ತು ಒಂದು ಹೋರಿಯನ್ನು ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಜಾನುವಾರು ಬೆಲೆ ಸುಮಾರು ಐದು ಸಾವಿರ ಹಾಗೂ ಜಾನುವಾರುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ KA-21 A-1513 ನೋಂದಣಿಯ ಪಿಕಪ್ ವಾಹನ ಬೆಲೆ ಸುಮಾರು ₹ 2 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಯ ವಿರುದ್ಧ ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ: 51-2021 ಕಲಂ: 5,7,12 ಕರ್ನಾಟಕ ಗೋಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!