Friday, June 5, 2026
Homeಕರಾವಳಿಬಂಟ್ವಾಳ: ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈಯಲು ಯತ್ನ !

ಬಂಟ್ವಾಳ: ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈಯಲು ಯತ್ನ !

- Advertisement -
- Advertisement -

ಬಂಟ್ವಾಳ: ಒಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿ ಕೊಲೆಗೈಯಲು ಯತ್ನಿಸಿದ ಘಟನೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅರೀಪೆಕಟ್ಟೆ ಎಂಬಲ್ಲಿ ಘಟನೆ ನಡೆದಿದೆ.

ಆರೋಪಿಯನ್ನು ಗೌಸ್ ಜಲಾಲುದ್ದೀನ್ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಫಾತಿಮತ್ ಬುಶ್ರಾ ಎಂದು ಗುರುತಿಸಲಾಗಿದೆ ಈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫಾತಿಮತ್ ಬುಶ್ರಾ ಅವರನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದೀನ್ ಎಂಬಾತನಿಗೆ ವಿವಾಹ ಮಾಡಿ ಕೊಟ್ಟಿದ್ದರು . ಇವರ ಮಧ್ಯೆ ಕೆಲ ತಿಂಗಳಿನಿಂದ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಆಕೆ ತವರು ಮನೆಗೆ ತೆರಳಿದ್ದಳು. ಇದರಿಂದ ಕೋಪಗೊಂಡ ಪತಿ ಗೌಸ್ ಜಲಾಲುದ್ದೀನ್ ತವರು ಮನೆಗೆ ಬಂದು ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಪೆಟ್ರೋಲ್ ಸುರಿದು ಕೊಲೆಗೈಯಲು ಯತ್ನಿಸಿದ್ದಾರೆ.

ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!