Thursday, June 4, 2026
Homeಕರಾವಳಿಬೆಳ್ತಂಗಡಿಯ ಪಿಲ್ಯದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ : ಹಲವರ ವಿರುದ್ಧ ಪ್ರಕರಣ ದಾಖಲು.

ಬೆಳ್ತಂಗಡಿಯ ಪಿಲ್ಯದಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ : ಹಲವರ ವಿರುದ್ಧ ಪ್ರಕರಣ ದಾಖಲು.

- Advertisement -
- Advertisement -

ಬೆಳ್ತಂಗಡಿ: ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರಿಗೆ ಕುಂದಾಪುರ ಎಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದಿಂದ ವಾರೆಂಟ್ ಜಾರಿಯಾದ ಹಿನ್ನೆಲೆ ಮಾಹಿತಿ ನೀಡಲು ಬಂದಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯ ಪಿಲ್ಯ ಗ್ರಾಮದ ಗೋಳಿಕಟ್ಟೆ ಎಂಬಲ್ಲಿ ನಡೆದಿದೆ.


ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ನಾರಾಯಣ ಗೌಡ ಹಾಗೂ ಕಾನ್ಸ್ ಟೇಬಲ್ ಲೋಹಿತ್ ಅವರು ನಿನ್ನೆ ಸಂಜೆ 4-30ರ ವೇಳೆಗೆ ಗೋಳಿಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಅವರ ವಿರುದ್ಧ ವಾರೆಂಟ್ ಜಾರಿಯಾದ್ದರಿಂದ ಈ ಬಗ್ಗೆ ಮಾಹಿತ ನೀಡಲು ಅವರ ಬಳಿ ತೆರಳಿದ್ದಾರೆ.ಅಲ್ಲದೇ ತನ್ನ ಐಡಿ ಕಾರ್ಡ್ ಗಳನ್ನು ತೋರಿಸಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ ವಾರೆಂಟ್ ಪ್ರತಿಯನ್ನು ತೋರಿಸಿದ್ದಾರೆ. ಆಗ ಅಬ್ದುಲ್ ಲತೀಫ್ ವಾರೆಂಟ್ ಕಿತ್ತುಕೊಂಡು ನೀವು ಯಾವ ಸೀಮೆಯ ಪೊಲೀಸರು ನನ್ನನ್ನು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ಪೊಲೀಸರ ಕಾಲರ್ ಹಿಡಿದು ಬೆದರಿಕೆ ಹಾಕಿದ್ದಾನೆ, ಅಲ್ಲಗೇ ಕಾನ್ಸ್ ಟೇಬಲ್ ಲೋಹಿತ್ ಅವರ ಕೈಗೆ ಕಚ್ಚಿದ್ದಾನೆ ಎನ್ನಲಾಗಿದೆ.

ಜೊತೆಗೆ ಹಲ್ಲೆ ನಡೆಸಿದ್ದಲ್ಲದೇ ಕಲ್ಲು ಎಸೆದಿದ್ದಾನೆ ಎನ್ನಲಾಗಿದೆ. ಇನ್ನು ಇದೇ ವೇಳೆ ಅಲ್ಲಿದ್ದ ಇತರರು ಕೂಡ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ನಾರಾಯಣ ಗೌಡ ನೀಡಿದ ದೂರಿಗೆ ವೇಣೂರು ಠಾಣೆಯಲ್ಲಿ ಕಲಂ 143,147,148,504,353,332 ಜೊತೆಗೆ 149 IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!