Friday, June 5, 2026
Homeಕರಾವಳಿಉಡುಪಿಉಡುಪಿ; ಗಾಂಜಾ ನಶೆಯಲ್ಲಿ  ಬ್ಲೇಡ್ ನಿಂದ ಇರಿದು ಯುವಕನ ಕೊಲೆಗೆ ಯತ್ನಿಸಿದ ನಾಲ್ವರು

ಉಡುಪಿ; ಗಾಂಜಾ ನಶೆಯಲ್ಲಿ  ಬ್ಲೇಡ್ ನಿಂದ ಇರಿದು ಯುವಕನ ಕೊಲೆಗೆ ಯತ್ನಿಸಿದ ನಾಲ್ವರು

- Advertisement -
- Advertisement -

ಉಡುಪಿ;  ಗಾಂಜಾ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಯುವಕರು ಯುವಕನೊಬ್ಬನಿಗೆ ಲೇಸರ್ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಆದಿಉಡುಪಿ ಎಪಿಎಂಸಿ ಮಾರ್ಕೆಟ್ ಹಿಂಬದಿ ನಡೆದಿದೆ.

ಆದಿಉಡುಪಿಯ ಪ್ರಶಾಂತ್ (27)  ಹಲ್ಲೆಗೊಳಗಾದವರು. ಪ್ರಶಾಂತ್ ಹಾಗೂ ಹಲ್ಲೆ ನಡೆಸುವ ವೇಳೆ ಗಾಯಗೊಂಡಿದ್ದ ಆರೋಪಿಗಳಾದ ಪ್ರಶಾಂತ್ ಮತ್ತು ಸಂತೋಷ್ ಎಂಬವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ

ಆದಿಉಡುಪಿ ಸಂತೆ ಮಾರ್ಕೆಟ್ ಹಿಂಬದಿ ಅನುಮಾನಾಸ್ಪದವಾಗಿ ನಿಂತಿದ್ದ ನಾಲ್ವರು ಯುವಕರನ್ನು ಪ್ರಶಾಂತ್ ಪ್ರಶ್ನೆ ಮಾಡಿದ್ದನು. ಈ ಸಂದರ್ಭ ಇವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದೇ ಸಿಟ್ಟಿನಲ್ಲಿ ಆರೋಪಿಗಳು ಪ್ರಶಾಂತ್ ಮನೆಯ ಕಿಟಕಿ ಗಾಜು ಒಡೆದು, ಬಾಗಿಲು ಮುರಿದು ಒಳ ನುಗ್ಗಿ ಪ್ರಶಾಂತ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಕ್ಷೌರಿಕರು ಉಪಯೋಗಿಸುವ ಲೇಸರ್ ಬ್ಲೇಡ್‌ನಿಂದ ಎದೆ ಹಾಗೂ ಹೊಟ್ಟೆಗೆ ಇರಿದರೆಂದು ದೂರಲಾಗಿದೆ.

ಇದರ ಪರಿಣಾಮ ಪ್ರಶಾಂತ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಸೇರಿದ ಸ್ಥಳೀಯರು ಆರೋಪಿಗಳ ಪೈಕಿ ಪ್ರಶಾಂತ್ ಮತ್ತು ಸಂತೋಷ ಎಂಬವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!