Saturday, June 6, 2026
Homeಕರಾವಳಿಸುಳ್ಯ: ಗುತ್ತಿಗಾರಿನಲ್ಲಿ ಯುವಕನ ಮೇಲೆ ಹಲ್ಲೆ: ಗಾಯಾಳು ಆಸ್ಪತ್ರೆಗೆ ದಾಖಲು

ಸುಳ್ಯ: ಗುತ್ತಿಗಾರಿನಲ್ಲಿ ಯುವಕನ ಮೇಲೆ ಹಲ್ಲೆ: ಗಾಯಾಳು ಆಸ್ಪತ್ರೆಗೆ ದಾಖಲು

- Advertisement -
- Advertisement -

ಸುಳ್ಯ: ನಿನ್ನೆ ಪ್ರವೀಣ್ ನೆಟ್ಟಾರು‌ಕೊಲೆ ಪ್ರಕರಣದ ಆರೋಪಿಗಳ‌ ಬಂಧನವಾಗುತ್ತಿದ್ದಂತೆ‌ ಗುತ್ತಿಗಾರಿನಲ್ಲಿ ಆರೋಪಿ ಶಫೀಕ್ ಕೆಲಸ ಮಾಡುತ್ತಿದ್ದ ಅಂಗಡಿ ಮೇಲೆ‌ ದಾಳಿಯಾಗಿತ್ತು. ಅಲ್ಲದೇ ಸುತ್ತಮುತಗತಲಿನ ಅಂಗಡಿಗಳನ್ನು ಬಂದ್ ಮಾಡಿಸಿದ್ದರುಮ.

ಅದರಂತೆ ಗುತ್ತಿಗಾರಿನ  ನ್ಯೂ ಸ್ಟಾರ್ ಬೇಕರಿ  ಮಾಲೀಕ ಬಶೀರ್ ಅವರ ಅಂಗಡಿಗೆ ಬಂದು ನಿನ್ನೆ  ಮಧ್ಯಾಹ್ನ ಎರಡು ಗಂಟೆಯ ಸಮಯದಲ್ಲಿ ಹಿಂದೂ ಸಂಘಟನೆಗಳ ಯುವಕರ ತಂಡ ಅಂಗಡಿ ಬಂದ್ ಮಾಡಲು ಹೇಳಿದ್ದಾರೆ ಎನ್ನಲಾಗಿದೆ.

ಈ ವೇಳೆ ಅಂಗಡಿ ಶಟರ್ ಬಂದು ಮಾಡಲು ತಿರುಗಿದಾಗ  ಗುಂಪಿನಲ್ಲಿ ಜಮಾಯಿಸಿದವರು ಯಾರೋ  ಬಶೀರ್ ರವರ ತಲೆಗೆ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದಾರೆ ಎನ್ನಲಾಗಿದೆ . ತಲೆ ತಿರುಗಿ ಅಸ್ವಸ್ಥರಾಗಿ ಜೀವಭಯದಿಂದ ಓಡಿ ಗುತ್ತಿಗಾರು ಮಸೀದಿ ಬಳಿ ಬಿದ್ದಿದ್ದಾರೆ ಎನ್ನಲಾಗಿದೆ.

ಇದನ್ನು ಗಮನಿಸಿದ  ಸ್ಥಳೀಯರು ಬಂದು  ತಲೆಯಿಂದ ರಕ್ತ ಸೋರುತ್ತಿರುವುದನ್ನು ಕಂಡು ಪ್ರಥಮ ಚಿಕಿತ್ಸೆ ನೀಡಿ ನಂತರ ಆಂಬುಲೆನ್ಸ್ ಮೂಲಕ ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!