Thursday, June 4, 2026
Homeತಾಜಾ ಸುದ್ದಿಗೋ ಹತ್ಯೆ ನೆಪದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಎಫ್ ಐ...

ಗೋ ಹತ್ಯೆ ನೆಪದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ: ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲು

- Advertisement -
- Advertisement -

ಚಿಕ್ಕಮಗಳೂರು:  ಗೋ ಹತ್ಯೆ ನೆಪದಲ್ಲಿ  ಇಬ್ಬರು ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಜುಲೈ 3 ರಂದು ಚಿಕ್ಕಮಗಳೂರಿನ ಬಾಲೆಹನ್ನೂರು ಪ್ರದೇಶದಲ್ಲಿ ಇಬ್ರಾಹಿಂ ಮತ್ತು ಮೊಹಮ್ಮದ್ ಹನೀಫ್ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಬಾಲೆ ಹೊನ್ನೂರು ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ.  ಗೋಹತ್ಯೆ ವಿರೋಧಿ ಕಾಯ್ದೆಯಡಿ ಇಬ್ರಾಹಿಂ ಮತ್ತು ಮೊಹಮ್ಮದ್ ಹನೀಫ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾಗೇ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳಾದ ಹರೀಶ್, ಸಂದೇಶ್, ಪ್ರಸನ್ನ ಮತ್ತು ಪ್ರೇಮೇಶ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 34,  379 (ಕಳ್ಳತನ), 429 ಅಡಿಯಲ್ಲಿ ಇಬ್ರಾಹಿಂ ಮತ್ತು ಮೊಹಮ್ಮದ್ ಹನೀಫ್ ವಿರುದ್ಧ ಹೆಚ್ಚುವರಿಯಾಗಿ ಪ್ರಕರಣ ದಾಖಲಿಸಲಾಗಿದೆ. ಹಲ್ಲೆ ಪ್ರಕರಣದ ನಾಲ್ವರು ಆರೋಪಿಗಳ ವಿರುದ್ಧ 143 (ಶಿಕ್ಷೆ), 504 (ಉದ್ದೇಶಪೂರ್ವಕ ಅವಮಾನ), 324 (ಶಸ್ತ್ರಾಸ್ತ್ರಗಳಿಂದ ನೋಯಿಸುವುದು), 323, 506 (ಕ್ರಿಮಿನಲ್ ಬೆದರಿಕೆ) ಮತ್ತು 149 (ಕಾನೂನುಬಾಹಿರ ಸಭೆ) ಸೆಕ್ಸನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!