Friday, June 5, 2026
Homeಕರಾವಳಿಕಡಬ:ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ: ವ್ಯಕ್ತಿಯಿಂದ ದೂರು ದಾಖಲು

ಕಡಬ:ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ: ವ್ಯಕ್ತಿಯಿಂದ ದೂರು ದಾಖಲು

- Advertisement -
- Advertisement -

ಕಡಬ:  ವ್ಯಕ್ತಿಯೊಬ್ಬರಿಗೆ ಹಲ್ಲೆ  ನಡೆಸಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ  ವಿರುದ್ದ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಲಂಕಾರಿನ ಹಳೇನೇರೆಂಕಿ ಗ್ರಾಮದ ಕಾಪಿಕಾಡುವಿನ ನಾರಾಯಣ ಅಮೈ ಎಂಬವರು ಗೋಪಾಲಕೃಷ್ಣ ಎಂಬವರ ವಿರುದ್ಧ ದೂರು ನೀಡಿದ್ದಾರೆ.  

ಆಲಂಕಾರಿನಲ್ಲಿ  ತನ್ನ  ಹೋಟೆಲ್ ನಲ್ಲೇ ವ್ಯಾಪಾರ ಮಾಡುತ್ತಿರುವ  ವೇಳೆ  ಸಂಬಂಧಿ  ಗೋಪಾಲಕೃಷ್ಣ  ಎಂಬವರು ಬಂದು  ಅವಾಚ್ಯ ಶಬ್ದಗಳಿಂದ ಬೈದು  ಕೈಯಲ್ಲಿ ಇದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದಲ್ಲದೆ, ಜತೆಯಲ್ಲಿದ್ದ ಪತ್ನಿಯನ್ನು  ಕೈಯಿಂದ ತಳ್ಳಿ  ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ.

ಹೋಟೆಲ್ ನಲ್ಲಿದ್ದ ಕೆಲಸದವರು ಬಂದಾಗ   ಕತ್ತಿಯನ್ನು ಅಲ್ಲಿಯೇ ಬಿಸಾಡಿ  ಹಲ್ಲೆ ನಡೆಸಿದಾತ  ಪರಾರಿಯಾಗಿದ್ದಾರೆ . ನಾನು ನನ್ನ ಪತ್ನಿ ಚಿಕಿತ್ಸೆಗಾಗಿ  ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ  ಬಿಡುಗಡೆಯಾಗಿದ್ದೇನೆ. ಹಾಗಾಗಿ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಬೇಕು ನಾರಾಯಣ ಅಮೈ  ದೂರಿನಲ್ಲಿ ತಿಳಿಸಿದ್ದಾರೆ .ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

- Advertisement -

Latest News

error: Content is protected !!