Sunday, June 7, 2026
Homeಕರಾವಳಿಉಡುಪಿಬೆಳಪು: ಅಕ್ರಮ ಕಸಾಯಿಖಾನೆ ಮೇಲೆ ದಾಳಿ: ಮೂವರು ವಶಕ್ಕೆ

ಬೆಳಪು: ಅಕ್ರಮ ಕಸಾಯಿಖಾನೆ ಮೇಲೆ ದಾಳಿ: ಮೂವರು ವಶಕ್ಕೆ

- Advertisement -
- Advertisement -

ಬೆಳಪು: ಶಿರ್ವ ಠಾಣಾಧಿಕಾರಿ ರಾಘವೇಂದ್ರ ಅವರ ತಂಡ ಬೆಳಪು ಗ್ರಾಮದ ಹಾಜಿಗೇಟ್‌ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆಗೆ ದಾಳಿ ನಡೆಸಿದೆ. ದಾಳಿಯಲ್ಲಿ ಒಂದು ಗಂಡು ಕರುವನ್ನು ರಕ್ಷಿಸಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಬೆಳಪು ಗ್ರಾಮದ ಹಾಜಿ ಗೇಟ್‌ ಬಳಿಯ ದಿ.ಸುಲ್ತಾನ್‌ ಅಹಮ್ಮದ್‌‌ ಅವರ ಮಗ ತಬ್ರೇಸ್‌ (30), ಮಲ್ಲಾರು ಗ್ರಾಮದ ಅಮಾನುಲ್ಲಾ ಅಸೈನ್‌‌ ಅವರ ಮಗ ಮೊಹಮ್ಮದ್ ಅಜೀಮ್‌ (39), ಬೆಳಪು ಗ್ರಾಮದ ಮಧುರಾ ಸ್ಟೋರ್‌ ಬಳಿಯ ನಿವಾಸಿ ಮಕ್ಬೂಲ್‌ ಹುಸೇನ್‌ ಅವರ ಮಗ ಮೊಹಮ್ಮದ್‌ ವಲೀದ್‌ (20) ಪೊಲೀಸರು ವಶಕ್ಕೆ ಪಡೆದ ಆರೋಪಿಗಳು. ಇವರು ಮನೆಯ ಬಳಿಯ ಶೆಡ್‌ವೊಂದರಲ್ಲಿ ಕದ್ದ ದನಗಳ ಮಾಂಸವನ್ನು ಮಾರಾಟ ಮಾಡ್ತಿದ್ರು ಎನ್ನಲಾಗಿದೆ.

- Advertisement -

Latest News

error: Content is protected !!