Wednesday, June 3, 2026
Homeಕರಾವಳಿಪುತ್ತೂರು:ರಿಕ್ಷಾ ಚಾಲಕನ ಮೇಲೆ ಹಲ್ಲೆ

ಪುತ್ತೂರು:ರಿಕ್ಷಾ ಚಾಲಕನ ಮೇಲೆ ಹಲ್ಲೆ

- Advertisement -
- Advertisement -

ಪುತ್ತೂರು:ರಿಕ್ಷಾ ಚಾಲಕನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಕೆದಂಬಾಡಿ ಗ್ರಾಮದ ದರ್ಬೆಯಲ್ಲಿ ನಡೆದಿದೆ. ಗೋಳ್ತಿಲ ಅರಿಯಡ್ಕ ನಿವಾಸಿ ಆಟೋ ಚಾಲಕ ಅನಿಲ್‌ ಕುಮಾರ್‌ (22) ಹಲ್ಲೆಗೊಳಗಾದವರು. ಮುಜೀದ್‌ ಎಂಬಾತ ಹಲ್ಲೆ‌ ನಡೆಸಿದ್ದಾನೆ ಎಂದು ಅನಿಲ್ ಆರೋಪಿಸಲಾಗಿದೆ.

ಅನಿಲ್‌ ಕುಮಾರ್‌ ಪ್ರಯಾಣಿಕರೊಬ್ಬರನ್ನು ಸಾಗು ಕಡೆಯಿಂದ ತಿಂಗಳಾಡಿ ಕಡೆಗೆ ಆಟೋದಲ್ಲಿ ಕರೆದುಕೊಂಡು ಹೋಗುತಿದ್ದರು. ಈ ವೇಳೆ ಕಾರಿನಲ್ಲಿ ಹಾರ್ನ್ ಮಾಡಿಕೊಂಡು ಬಂದ ಮುಜೀದ್‌ ಓವರ್‌ ಟೇಕ್‌ ಮಾಡಿ ಕಾರಿನಿಂದ ಇಳಿದು ಆಟೋ ರಿಕ್ಷಾವನ್ನು ನಿಲ್ಲಿಸಿ ಅನಿಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅನಿಲ್‌ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!