Friday, May 17, 2024
Homeಕರಾವಳಿಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ರನ್ನು ಭೇಟಿಯಾದ ಕಾಲಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾದ...

ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ರನ್ನು ಭೇಟಿಯಾದ ಕಾಲಲ್ಲೇ ಪರೀಕ್ಷೆ ಬರೆದು ಡಿಸ್ಟಿಂಕ್ಷನ್ ನಲ್ಲಿ ಪಾಸಾದ  ಕೌಶಿಕ್ ಆಚಾರ್ಯ

spot_img
- Advertisement -
- Advertisement -

ಬಂಟ್ವಾಳ: ಕಾಲಲ್ಲೇ ಪರೀಕ್ಷೆ ಬರೆದು  ಡಿಸ್ಟಿಂಕ್ಷನ್ ನಲ್ಲಿ ಪಾಸಾದ ಬಂಟ್ವಾಳ ಕೌಶಿಕ್ ಆಚಾರ್ಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾನೆ.

ಪಿಯು ಪರೀಕ್ಷೆಯಲ್ಲಿ 600ರಲ್ಲಿ 524 ಅಂಕಗಳನ್ನು ಪಡೆದ ಬಂಟ್ವಾಳದ  ಕೌಶಿಕ್  ಆಚಾರ್ಯ ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಯಾಗಿದ್ದು, ಈತನ ಓದಿಗೆ ಆಸರೆಯಾದ ಬಂಟ್ವಾಳ ಶಾಸಕರಿಗೆ ತನ್ನ ತಾಯಿ ಜೊತೆಯಲ್ಲಿ ಶಾಸಕರ ಕಚೇರಿಗೆ ಬಂದು ಧನ್ಯವಾದ ತಿಳಿಸಿದ್ದಾನೆ.   ಶಾಸಕರು ಕೌಶಿಕ್ ನ ಬಾಯಿಗೆ ಸಿಹಿ ತಿನ್ನಿಸಿ ಮುಂದಿನ ಉನ್ನತ ಶಿಕ್ಷಣ ಕ್ಕೂ ತಾನು ಸಹಾಯ ಮಾಡುತ್ತೇನೆ ಎಂಬ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು.

ವಿಕಲಾಂಗತೆ ಸಾಧನೆಗೆ ಅಡ್ಡಿಯಾಗುವುದಿಲ್ಲ, ಛಲವೊಂದಿದ್ದರೆ ಸಫಲತೆ ಕಾಣಬಹುದು ಎಂಬುದಕ್ಕೆ ಸಾಕ್ಷಿಯಾಗಿರುವ ಬಂಟ್ವಾಳದ ಕೌಶಿಕ್  ಪಿಯುಸಿಯಲ್ಲಿ ಕಾಲಲ್ಲೇ ಪರೀಕ್ಷೆ ಬರೆದು  ಡಿಸ್ಟಿಂಕ್ಷನ್! ಅಂಕಗಳ ಮೂಲಕ ಶಹಬ್ಬಾಸ್ ಗಿರಿಗೆ ಪಾತ್ರವಾಗಿದ್ದಾನೆ.  ಹುಟ್ಟುತ್ತಲೇ ಎರಡೂ ಕೈಗಳ ಆಧಾರವಿಲ್ಲದೇ ಬೆಳೆದ ಬಂಟ್ವಾಳ ಮೂಲದ ಪ್ರಸ್ತುತ  ಮೂಡುಬಿದಿರೆಯ ಆಳ್ವಾಸ್ ಪಿಯುಸಿ ವಿದ್ಯಾರ್ಥಿ ಕೌಶಿಕ್ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಕಾಲಲ್ಲೇ ಬರೆದು ಡಿಸ್ಟಿಂಕ್ಷನ್‌ ಸಾಧನೆಯೊಂದಿಗೆ ಉತ್ತೀರ್ಣರಾಗಿದ್ದಾನೆ.

 ತನ್ನ ವಿಶೇಷ  ಪರಿಶ್ರಮದಿಂದ ಹಾಗೂ ಶಿಕ್ಷಕರ ಪ್ರೋತ್ಸಾಹ ದಿಂದ  600ರಲ್ಲಿ 524 ಅಂಕಗಳನ್ನು ಪಡೆದು  ಅ೦ಗವೈಕಲ್ಯವನ್ನೇ ಮೆಟ್ಟಿ ನಿಂತು ಗೆದ್ದಿದ್ದಾರೆ. ಬಂಟ್ವಾಳ ಕಂಚಿಗಾರ ಪೇಟೆ ಮನೆ ನಿವಾಸಿ ದಿ!  ರಾಜೇಶ್ ಆಚಾರ್ಯ ಜಲಜಾಕ್ಷಿ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೆಯವರಾದ ಕೌಶಿಕ್ ಹುಟ್ಟಿನಲ್ಲೇ ಅ೦ಗವೈಕಲ್ಯದಿಂದ ಬಳಲಿದವರು, ಈ ಹಂತದಲ್ಲಿ ಮಗನಿಗೆ ಅಮ್ಮನೇ ಮೊದಲ ಗುರುವಾಗಿ ಅಕ್ಷರ ಕಲಿಸಿದ್ದರು. ಬಂಟ್ವಾಳ ದೇಳವದ ಎಸ್.ವಿ.ಎಸ್. ಶಾಲೆಯಲ್ಲಿ ಕೊನೆಗೂ ಕಲಿಕೆಗೆ ಅವಕಾಶ ದೊರೆತು ಎಸ್ಸೆಸ್ಸೆಲ್ಸಿ ಕಾಲಲ್ಲೇ ಬರೆದ ಕೌಶಿಕ್ ಪ್ರಥಮ  ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.

 ಪೊಳಲಿಗೆ ಭೇಟಿ ನೀಡಿದ್ದ ಅ೦ದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಪ್ರತಿಭೆಯನ್ನು ಶ್ಲಾಘಿ ಸಿದ್ದು ಸ್ಥಳದಲ್ಲಿದ್ದ ಶಾಸಕ ರಾಜೇಶ್ ನಾಯ್ಕ ಜತೆಗಿದ್ದ ಡಾ. ಎಂ.ಮೋಹನ ಆಳ್ವರಲ್ಲಿ ಹುಡುಗನ ಬಗ್ಗೆ ಪ್ರಸ್ತಾಪಿಸಿದಾಗ ಈ ಪ್ರತಿಭೆಯನ್ನು ಅಂದೇ. ಆಳ್ವರು ದತ್ತು ಸ್ವೀಕರಿಸಿದ್ದರು. ಉನ್ನತ ಕಲಿಕೆಯ ಕನಸು ಜೊತೆಗೆ ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಮುಂದುರಿಸಿಕೊಂಡು  ಮುಂದೆ  ಬ್ಯಾ೦ಕಿ೦ಗ್ ಉದ್ಯೋಗಿಯಾಗಬೇಕು ಎನ್ನುವ ಕೌಶಿಕ್ ಆಸೆಗೆ ಆಳ್ವಾಸ್ ಮತ್ತೆ ಆಸರೆಯಾಗುತ್ತಿದೆ.

ಡಾ. ಎಂ. ಮೋಹನ ಆಳ್ವ ಮತ್ತು ಸಂಸ್ಥೆಯ ಉಪನ್ಯಾಸಕರು ಮತ್ತಿತರ ಎಲ್ಲ ಮ೦ದಿಯ ಸಹಕಾರ, ಸಹೋದರರ ಪ್ರೋತ್ಸಾಹ ವಿಶೇಷವಾಗಿ ತಾಯಿಯ ಕ್ರೀಡೆಯಲ್ಲೂ ಮು೦ದಿದ್ದಾರೆ. ಕಾಲನ್ನೇ ಬಳಸಿಕೊಂಡರೂ ಎಲ್ಲರಂತೆ ಸಹಜ ವೇಗದಿಂದ ಬರೆಯಬಲ್ಲ ಸಾಮರ್ಥ್ಯ ಕೌಶಿಕ್‌ನ ವಿಶೇಷತೆ, ಕಲಿಕೆಗೆ ಸ್ಫೂರ್ತಿ ತು೦ಬಿದ ತಂದೆ ರಾಜೇಶ್ ಪಿಯುಸಿ ಪರೀಕ್ಷೆಯ ಸಂದರ್ಭದಲ್ಲೇ ಅಗಲಿದ ಬಗ್ಗೆ ಅತನ‌ ಮನಸ್ಸಿನಲ್ಲಿ ನೋವಿದೆ.

- Advertisement -
spot_img

Latest News

error: Content is protected !!