Friday, April 26, 2024
Homeಕರಾವಳಿಮಂಗಳೂರಿನಲ್ಲಿ ATMಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದವರನ್ನು ಹಿಡಿದ ಸ್ಥಳೀಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರಿನಲ್ಲಿ ATMಗೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದವರನ್ನು ಹಿಡಿದ ಸ್ಥಳೀಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

spot_img
- Advertisement -
- Advertisement -

ಮಂಗಳೂರು: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳಾದೇವಿಯಲ್ಲಿರುವ ಎಸ್ ಬಿಐ ಎಟಿಎಂನಲ್ಲಿ‌ ಈ ವಂಚಕರು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯರು ಇವರನ್ನು ಸೆರೆ ಹಿಡಿಯಲು ಹೋದಾಗ ವಂಚಕರು ತಪ್ಪಿಸಲು ಯತ್ನಸಿದ್ದಾರೆ. ಕೂಡಲೇ ಮೂವರು ಸೇರಿ ವಂಚಕರನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಖದೀಮರು ಎಟಿಎಂ ಯಂತ್ರಗಳಲ್ಲಿ ಸೂಕ್ಷ್ಮ ಉಪಕರಣ ಅಳವಡಿಸಿ  ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು ಅನಂತರ ನಕಲಿ ಕಾರ್ಡ್‌ ತಯಾರಿಸಿ ಹಣ ವಿದ್‌ ಡ್ರಾ ಮಾಡುತ್ತಿದ್ದರು.  

ಇನ್ನು ವಂಚಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ, ನಗರದ ಚಿಲಿಂಬಿ, ನಾಗುರಿ ಮತ್ತು ಕುಳಾಯಿ ತಲಾ ಒಂದು ಎಟಿಎಂಗಳಲ್ಲಿ ಈ ರೀತಿ ಸ್ಕಿಮ್ಮಿಂಗ್‌ ನಡೆದಿದ್ದು, ವಂಚಕರು ನೂರಾರು ಗ್ರಾಹಕರ ಲಕ್ಷಾಂತರ ರೂಪಾಯಿಗಳನ್ನು ಎಗರಿಸಿದ್ದಾರೆ.

- Advertisement -
spot_img

Latest News

error: Content is protected !!