Saturday, June 6, 2026
Homeಕರಾವಳಿಉಪ್ಪಿನಂಗಡಿ; ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ, ಕೊಲೆಗೆ ಯತ್ನ

ಉಪ್ಪಿನಂಗಡಿ; ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ, ಕೊಲೆಗೆ ಯತ್ನ

- Advertisement -
- Advertisement -

ಉಪ್ಪಿನಂಗಡಿ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡಹೊಳೆ ಎಂಬಲ್ಲಿ  ನಡೆದಿದೆ. ಜೋಯ್ ವಿ.ಡಿ ಇಚಲಂಪಾಡಿ ಎಂಬವರ ಮೇಲೆ ಮೊನ್ನೆ ರಾತ್ರಿ 12:30 ರಿಂದ 1:30 ನಡುವೆ ಹಲ್ಲೆ ಮಾಡಿ ದರೋಡೆ ಮಾಡಿದ್ದಲ್ಲದೇ ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನವನೀತ್ ಮೋಹನ್, ಸುಜಿತ್ ಸುಗತನ್, ರಾಹುಲ್ ಅಡ್ಡಹೊಳೆ, ಎಂಬವರು ಹಲ್ಲೆ ನಡೆಸಿ, ದರೋಡೆ ಮಾಡಿ ಬಳಿಕ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.  

ಮೂವರು ಆರೋಪಿಗಳ ತಂಡ ಆಟೋದಲ್ಲಿ ಬಂದು ಜೋಯ್ ಎಂಬವರ ಮೊಬೈಲ್, ಹಣ ದೋಚಿದ್ದಾರೆ. ಬಳಿಕ ಹಣಕ್ಕೆ ಬೇಡಿಕೆ ಇಟ್ಟು ಹಲ್ಲೆ, ದರೋಡೆ, ಕೊಲೆಯತ್ನ ನಡೆಸಿದ್ದಾರೆ. ಬಳಿಕ ಪ್ರವಾಸಿಗರ ಕಾರು ಬಂದಾಗ, ಆರೋಪಿಗಳು ಗಾಯಾಳುವನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಇದೀಗ ಗಾಯಾಳು ಜೋಯ್ ಇವರು ಕಡಬದ ಸರಕಾರಿ ಆಸ್ಪತೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!