ಪುತ್ತೂರು:ಕಾರಿನಲ್ಲಿ ಹೋಗುವಾಗ ರಸ್ತೆ ಹೊಂಡಗಳನ್ನ ಕಂಡು ಗಂರ ಆದ ಶಾಸಕ ಅಶೋಕ್ ರೈ ಹೊಂಡ ಮುಚ್ಚದ ನಗರಸಭಾ ಕಮಿಷನರ್ ಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚದ ಹಿನ್ನಲೆ ಅಧಿಕಾರಿಯನ್ನು ಫೋನ್ ಮೂಲಕವೇ ಶಾಸಕ ಅಶೋಕ್ ರೈ ತರಾಟೆಗೆ ತೆಗೆದುಕೊಂಡಿದ್ದಾರೆ. ರೋಡ್ ಪ್ಯಾಚ್ ವರ್ಕ್ ಮಾಡಿ ಎಂದು ಎಷ್ಟು ಸಲ ಹೇಳಬೇಕು. ನಾನು ಹೇಳೋ ಭಾಷೆ ನಿಮಗೆ ಅರ್ಥವಾಗುತ್ತೋ ಇಲ್ಲವೇ.?. ಎಲ್ಲದಕ್ಕೂ ಇಂಜಿನಿಯರ್ ಅಂತಾ ಹೇಳಿದ್ರೆ… ನೀವು ಯಾಕೆ ಕಮಿಷನರ್ ಆಗಿ ಇರುವುದು. ಯಾವನ್ ಅವನು ಇಂಜಿನಿಯರ್ ತಲೆ ಕೆಟ್ಟಿದ್ಯಾ ಅವನಿಗೆ?. ನಾಳೆ ಕೆಲಸ ಆಗದಿದ್ರೆ ಮತ್ತೆ ಏನು ಮಾಡುತ್ತೇನೆ ನೋಡಿ ಎಂದು ಎಚ್ಚರಿಸಿದ್ದಾರೆ.
ಈ ರಸ್ತೆಯಲ್ಲಿ ಹೋಗುವ ಜನ ಇಲ್ಲಿ ಸಾಯುತ್ತಿದ್ದಾರೆ. ನಾನು ಅದೇ ರಸ್ತೆಯಲ್ಲಿ ಹೋಗುತ್ತಿದ್ದೇನೆ ಎಲ್ಲಿ ಕೆಲಸ ನಡೆಯುತ್ತಿದೆ.ನೀವು ಒಬ್ಬ ಕಮಿಷನರಾ.? ಎಲ್ಲದ್ದಕ್ಕು ಕೆಳ ಹಂತದ ಅಧಿಕಾರಗಳತ್ತ ಕೈ ತೋರಿಸುತ್ತಿರಾ. ಡೋಂಟ್ ಟೇಕ್ ಇಟ್ ಲೈಟ್ಲಿ. ಮುಂದಿನ ಮಳೆಗಾಲದವರೆಗೂ ಹೀಗೆ ಕಾಲ ಕಳೆಯುತ್ತಿರಾ.? ಎಂದು ಪ್ರಶ್ನಿಸಿದ್ದಾರೆ.


