Tuesday, June 9, 2026
Homeಕರಾವಳಿಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಅಶೋಕ್ ಕುಮಾರ್ ರೈ: ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ

ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕಾಗಿ ಪ್ರಾರ್ಥನೆ ಸಲ್ಲಿಸಿದ ಅಶೋಕ್ ಕುಮಾರ್ ರೈ: ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆ

- Advertisement -
- Advertisement -

ಪುತ್ತೂರು: ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನ.25-26 ರಂದು ನಡೆಯಲಿರುವ ಕಂಬಳದ ಯಶಸ್ಸಿಗಾಗಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ ಅಶೋಕ್ ಕುಮಾರ್ ರೈ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರಾಥನೆ ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಮ್ಮ ಸಂಸ್ಕೃತಿಯ ಕಂಬಳ ಬಹಳ ವಿಜೃಂಭಣೆಯಿಂದ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದ್ದು, ಇದರ ಎಲ್ಲಾ ಪೂರ್ವಭಾವಿ ಕಾರ್ಯಗಳು ನಡೆಯುತ್ತಿದೆ. ಅ.11ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಬೆಂಗಳೂರಿನಲ್ಲಿ ಕರೆ ಮುಹೂರ್ತ ನಡೆಯಲಿದೆ.  ದಕ್ಷಿಣ ಕನ್ನಡ, ಉಡುಪಿ ಅವಿಭಜಿತ ಜಿಲ್ಲೆಯ ಬಂಧುಗಳಿಂದ ಈ ಕ್ರೀಡೆ ದೇಶಕ್ಕೆ ಪರಿಚಯ ಮಾಡುವ ಕಾರ್ಯವಾಗಲಿದೆ ಎಂದು ತಿಳಿಸಿದರು.

ಇನ್ನು ಈ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಸದಸ್ಯ ಶೇಖರ್ ನಾರಾವಿ, ಕಂಬಳ ಸಮಿತಿಯ ಮುರಳೀಧರ ರೈ ಮಠಂತಬೆಟ್ಟು, ಪಂಜಿಗುಡ್ಡೆ ಈಶ್ವರ ಭಟ್, ಪ್ರಸನ್ನ ಕುಮಾ‌ ರೈ, ಕಂಬಳ ಸಮಿತಿ ಉಮೇಶ್ ಕರ್ಕೆರ, ಕೋಣದ ಮಾಲಕ ಕೇಶವ ಕೈಪ, ಸಮಿತಿ ಕೃಷ್ಣಪ್ರಸಾದ್ ಆಳ್ವ ಶಿವರಾಮ ಆಳ್ವ ರಂಜಿತ್ ಬಂಗೇರ ಸಹಿತ ಕಂಬಳದ ಕೋಣಗಳ ಮಾಲಕರುಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!