Tuesday, May 7, 2024
Homeಕರಾವಳಿಕಲ್ಯಾ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಕಲ್ಯಾ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

spot_img
- Advertisement -
- Advertisement -

ಕಾರ್ಕಳ: ಇತ್ತೀಚೆಗೆ ಬಜಗೋಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ನಡೆದ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಲ್ಯಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ಬಹುಮಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

10ನೇ ತರಗತಿ ವಿದ್ಯಾರ್ಥಿ ಹಿತೇಶ್ 800ಮೀ ಓಟ, ಟ್ರಿಪಲ್ ಜಂಪ್, ಹಾಗೂ 110 ಮೀ. ಹರ್ಡಲ್ಸ್ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಾದ ಚೈತ್ರಾ ಆಚಾರ್ಯ ಎತ್ತರ ಜಿಗಿತದಲ್ಲಿ ಪ್ರಥಮ, ರಿತೀಕ್ಷಾ 100 ಮೀ ಹರ್ಡಲ್ಸ್‍ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. 

ಇದರೊಂದಿಗೆ 400 ಮೀ. ಓಟದಲ್ಲಿ ಆದಿತ್ಯ, ಎತ್ತರ ಜಿಗಿತದಲ್ಲಿ ಜಯಂತ್ ದ್ವಿತೀಯ ಸ್ಥಾನ, 1500 ಮೀ. ಓಟದಲ್ಲಿ ಶರಣ್, ಎತ್ತರ ಜಿಗಿತದಲ್ಲಿ ಶ್ರೇಯಾ ಹಾಗೂ ಸಿಂಚನಾ, ಭಾರದ ಗುಂಡು ಎಸೆತ ಮತ್ತು ತಟ್ಟೆ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಲ್ಯಾ ಶಾಲೆಗೆ ಒಟ್ಟು 12 ಪದಕ ಲಭಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಅಭಿನಂದಿಸಿದ್ದಾರೆ.

- Advertisement -
spot_img

Latest News

error: Content is protected !!