Friday, July 3, 2026
Homeಕರಾವಳಿಮಂಗಳೂರುಬಂಟ್ವಾಳ; ಸಜೀಪಮಾಗಣೆಯ ಕಾಂತಾಡಿಗುತ್ತಿನ ಗಡಿ ಪ್ರಧಾನರಾದ ಬರಂಗರೆ ಗಣೇಶ್ ನಾಯ್ಕ್ ನಿಧನ

ಬಂಟ್ವಾಳ; ಸಜೀಪಮಾಗಣೆಯ ಕಾಂತಾಡಿಗುತ್ತಿನ ಗಡಿ ಪ್ರಧಾನರಾದ ಬರಂಗರೆ ಗಣೇಶ್ ನಾಯ್ಕ್ ನಿಧನ

- Advertisement -
- Advertisement -

ಬಂಟ್ವಾಳ; ಸಜೀಪಮಾಗಣೆಯ ಕಾಂತಾಡಿಗುತ್ತಿನ ಗಡಿ ಪ್ರಧಾನರಾದ ಬರಂಗರೆ ಉಗ್ಗ ಶೆಟ್ಟಿ ಯಾನೆ ಗಣೇಶ್ ನ್ಯಾಕ್ (88) ಜು.1ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮುಂಬಯಿಯಲ್ಲಿ ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ಅವರು ಬಳಿಕ ಚೆನ್ನೈಯಲ್ಲಿ ಸ್ವಂತ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದ್ದರು. 10 ವರ್ಷಗಳಿಂದ ಸಜಿಪ ಮಾಗಣೆಯ ಕಾಂತಾಡಿಗುತ್ತಿನ ಗಡಿ ಪ್ರಧಾನರಾಗಿ ಸೇವೆ ಸಲ್ಲಿಸಿದ್ದರು. ಶಾಸಕ ಯು. ರಾಜೇಶ್ ನ್ಯಾಕ್, ಮಾಜಿ ಸಚಿವ ಬಿ.ರಮಾನಾಥ ರೈ ಮೊದಲಾದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಕುಟುಂಬವರ್ಗಕ್ಕೆ ಮತ್ತು ಸಮಸ್ತ ಮಾಗಣೆಗೆ ದು:ಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

- Advertisement -

Latest News

error: Content is protected !!