Thursday, June 4, 2026
Homeಕರಾವಳಿಆಶ್ಲೇಷ ನಕ್ಷತ್ರ ವಿಶೇಷ ದಿನದ ಹಿನ್ನೆಲೆ ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜನಜಾತ್ರೆ!..

ಆಶ್ಲೇಷ ನಕ್ಷತ್ರ ವಿಶೇಷ ದಿನದ ಹಿನ್ನೆಲೆ ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜನಜಾತ್ರೆ!..

- Advertisement -
- Advertisement -

ಸುಬ್ರಹ್ಮಣ್ಯ: ಇಲ್ಲಿನ ಪ್ರಸಿದ್ದ ಕುಕ್ಕೆ‌ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲ ದಿನಗಳಿಂದ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದು, ಇಂದು ಆಶ್ಲೇಷ ನಕ್ಷತ್ರ ವಿಶೇಷ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸೋಮವಾರದ ವಿಶೇಷ ಸೇವೆ ನೆರವೇರಿಸಲು ಭಕ್ತರು ರವಿವಾರ ರಾತ್ರಿಯೇ ಸರತಿ ಸಾಲಿನಲ್ಲಿ ನಿಂತಿದ್ದರು.

ದೇವಾಲಯದಲ್ಲಿ ಸೇವೆಗಳ ರಶೀದಿಯನ್ನು ಬೆಳಿಗ್ಗೆ 6 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ ಬೆಳಗ್ಗೆಯಿಂದಲೇ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತಸಾಗರ ಕಂಡುಬಂದಿದ್ದು ಭಕ್ತರು ರಶೀದಿ ವಂಚಿತವಾಗುವ , ತಡವಾಗುವ ಆತಂಕದಿಂದ ರವಿವಾರ ರಾತ್ರಿಯೇ ದೇವಲದ ಕಛೇರಿ ಬಳಿ ಸರತಿ‌ ಸಾಲಿನಲ್ಲಿ ನಿಂತಿದ್ದರು.

- Advertisement -

Latest News

error: Content is protected !!