Friday, May 3, 2024
Homeಪ್ರಮುಖ-ಸುದ್ದಿಗೋವಿಂದ ಕಾರಜೋಳರಿಗೆ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆ

ಗೋವಿಂದ ಕಾರಜೋಳರಿಗೆ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆ

spot_img
- Advertisement -
- Advertisement -

ಬೆಂಗಳೂರು : ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮತ್ತೆ 2 ಖಾತೆಗಳ ಜವಾಬ್ದಾರಿ ಸಿಗಲಿದೆ. ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಖಾತೆಯನ್ನೂ ಸಹ ಕಾರಜೋಳರಿಗೆ ನೀಡೋದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸಿ.ಟಿ. ರವಿ ಹೊಂದಿದ್ದ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಖಾತೆಯನ್ನು ಗೋವಿಂದ ಕಾರಜೋಳಗೆ ನೀಡಲು ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದ್ದು, ಗೋವಿಂದ್ ಕಾರಜೋಳ ಬಳಿಯಿದ್ದ ಸಮಾಜ ಕಲ್ಯಾಣ ಖಾತೆಯನ್ನು ಬಿ.ಶ್ರೀರಾಮುಲುಗೆ ನೀಡಲು ತೀರ್ಮಾನಿಸಲಾಗಿದೆ.

ಇನ್ನು ಕಾರಜೋಳ ಅವರು ಸಮಾಜ ಕಲ್ಯಾಣ ಮತ್ತು ಪಿಡಬ್ಲ್ಯೂಡಿ ಖಾತೆ ಹೊಂದಿದ್ದರು. ಇದೀಗ ಸಮಾಜ ಕಲ್ಯಾಣ ಖಾತೆ ರಾಮುಲುಗೆ ನೀಡಿ ಪಿಡಬ್ಲ್ಯೂಡಿ ಖಾತೆ ಜೊತೆಗೆ ಪ್ರವಾಸೋದ್ಯಮ ಮತ್ತು ಕನ್ನಡ-ಸಂಸ್ಕೃತಿ ಖಾತೆ ಹೆಚ್ಚುವರಿಯಾಗಿ ನೀಡಲು ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!