Friday, June 5, 2026
Homeತಾಜಾ ಸುದ್ದಿಬ್ಲಾಕ್ ಪ್ರೊಫೈಲ್ ಫೋಟೋ ಹಾಕಿ ಕಂಬನಿ ಮಿಡಿದ ಅರ್ಜುನ್ ಸರ್ಜಾ

ಬ್ಲಾಕ್ ಪ್ರೊಫೈಲ್ ಫೋಟೋ ಹಾಕಿ ಕಂಬನಿ ಮಿಡಿದ ಅರ್ಜುನ್ ಸರ್ಜಾ

- Advertisement -
- Advertisement -

ಬೆಂಗಳೂರು: ಇಂದು ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಮಾವ, ಖ್ಯಾತ ನಟ ಅರ್ಜುನ್​ ಸರ್ಜಾ ತಮ್ಮ ಫೇಸ್​ಬುಕ್​​ನಲ್ಲಿ ಕಪ್ಪುಬಣ್ಣದ ಫೋಟೋಗಳನ್ನು ಅಪ್ಲೋಡ್​ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.

ಅರ್ಜುನ್​ ಸರ್ಜಾ ಚೆನ್ನೈನಿಂದ ಈಗಾಗಲೇ ಹೊರಟಿದ್ದಾರೆ. ಚಿರಂಜೀವಿ ಮೃತಪಟ್ಟ ಬಳಿಕ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಫೇಸ್​ಬುಕ್​ನ ಪ್ರೊಫೈಲ್​ ಹಾಗೂ ಕವರ್ ಫೋಟೋಗಳಿಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಅರ್ಜುನ್‌ ಸರ್ಜಾ ಅವರಿಗೆ ಸೋದರಳಿಯರಾದ ಚಿರಂಜೀವಿ ಮತ್ತು ಧ್ರುವ ಬಗ್ಗೆ ಅಪಾರ ಕಾಳಜಿ ಇತ್ತು. ಅವರಿಬ್ಬರ ವೃತ್ತಿಜೀವನಕ್ಕೆ ಅರ್ಜುನ್‌ ಅವರೇ ಮಾರ್ಗದರ್ಶಕರು. ಇನ್ನು, ಚಿರು ಮತ್ತು ಧ್ರುವ ನಡುವೆ ಕೂಡ ತುಂಬ ಆತ್ಮೀಯತೆ ಇತ್ತು. ಪರಸ್ಪರರ ಸಿನಿಮಾಗಳಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಇಬ್ಬರು ಜೊತೆಯಾಗಿ ಕಾಲ ಕಳೆದ ವಿಡಿಯೋಗಳನ್ನು ಟಿಕ್‌ಟಾಕ್‌ ಮೂಲಕ ಚಿರು ಇತ್ತೀಚೆಗೆ ಶೇರ್‌ ಮಾಡಿಕೊಂಡಿದ್ದರು.

- Advertisement -

Latest News

error: Content is protected !!