Wednesday, June 3, 2026
Homeಕರಾವಳಿಸುಳ್ಯ: ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರ ನಡುವೆ ವಾಗ್ವಾದ: ದಲಿತನಿಂದನೆ ಪ್ರಕರಣದಡಿಯಲ್ಲಿ ನಾಲ್ವರ ವಿರುದ್ಧ...

ಸುಳ್ಯ: ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರ ನಡುವೆ ವಾಗ್ವಾದ: ದಲಿತನಿಂದನೆ ಪ್ರಕರಣದಡಿಯಲ್ಲಿ ನಾಲ್ವರ ವಿರುದ್ಧ ಎಫ್.ಐ.ಆರ್ ದಾಖಲು!

- Advertisement -
- Advertisement -

ಸುಳ್ಯ: ಅಂಗನವಾಡಿ ಕಾರ್ಯಕರ್ತೆ ಹಾಗೂ ಪೋಷಕರ ಮಧ್ಯೆ ನಡೆದ ವಾಗ್ವಾದಕ್ಕೆ ಸಂಬಂಧಿಸಿ, ಅಂಗನವಾಡಿ ಕಾರ್ಯಕರ್ತೆ ನೀಡಿದ ದೂರಿನಂತೆ ನಾಲ್ವರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ದಲಿತನಿಂದನೆ ಪ್ರಕರಣದಡಿಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

ಜಾಲ್ಲೂರು ಗ್ರಾಮದ ಮರಸಂಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಅಂಜಲಿ ಅವರು ಆಗಸ್ಟ್ 26ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸೆಪ್ಟೆಂಬರ್ 5 ರಂದು ದಾಖಲುಗೊಂಡಿದ್ದು, ಸೆ.6ರಂದು ಪುತ್ತೂರು ಡಿ.ವೈ.ಎಸ್.ಪಿ. ಅವರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿದವರ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದಾರೆ.

ವಿನೋದ್ ಕುಮಾರ್, ದಿನೇಶ್ ಪಾಟಾಳಿ, ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ಉಷಾ, ಆಶಾ ಕಾರ್ಯಕರ್ತೆ ಶ್ರೀಮತಿ ಸರಸ್ವತಿ ಅವರ ಮೇಲೆ ಕೇಸು ದಾಖಲಾಗಿರುವುದರಿಂದ ಪೋಲೀಸರ ಮುಂದಿನ ನಡೆ ಕುತೂಹಲ ಮೂಡಿಸಿದೆ.

- Advertisement -

Latest News

error: Content is protected !!