Sunday, June 7, 2026
Homeಅಪರಾಧಬೆಳ್ತಂಗಡಿ: ನಾಲ್ಕು ದಿನದಿಂದ ತಾಯಿ-ಮಗಳು ನಾಪತ್ತೆ, ಪ್ರಕರಣ ದಾಖಲು

ಬೆಳ್ತಂಗಡಿ: ನಾಲ್ಕು ದಿನದಿಂದ ತಾಯಿ-ಮಗಳು ನಾಪತ್ತೆ, ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ತಾಯಿ ಹಾಗೂ ಮಗಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ನಡ ಗ್ರಾಮದ ನಿವಾಸಿ ಅಬ್ದುಲ್ ಅಜೀಜ್ ಎಂಬವರ ಪುತ್ರಿ ಝೀನತ್ ಭಾನು(31) ಹಾಗೂ ಆಕೆಯ ಮಗಳು ಝಕಿಯಾ(8) ಎಂಬವರೇ ನಾಪತ್ತೆಯಾದವರು.

ತಾಯಿ ಹಾಗೂ ಮಗಳು ಶನಿವಾರ ಮಧ್ಯಾಹ್ನ ಮನೆಯಿಂದ ಹೋದವರು ಮನೆಗೆ ಹಿಂತಿತುಗಿರಲಿಲ್ಲ. ಇವರಿಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿಗಳು ಲಭಿಸದ ಹಿನ್ನಲೆಯಲ್ಲಿ ಈ ಬಗ್ಗೆ ಬೆಳ್ತಂಗಡಿ ಪೋಲೀಸರಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!